ಮುಂಬಯಿ: ಚೆಂಬೂರು ಕರ್ನಾಟಕ ಸಂಘ ಸಂಚಾಲಿತ ಚೆಂಬೂರು ಕರ್ನಾಟಕ ಶಾಲೆಯಲ್ಲಿ ವರ್ಷಂಪ್ರತಿ ಆಚರಿಸಿ ಕೊಂಡುಬರುತ್ತಿರುವ ಶಾರದಾ ಪೂಜೆಯನ್ನು ಈ ಬಾರಿ ಅ.೪ರಂದು ಶ್ರದ್ಧಾಪೂರ್ವಕವಾಗಿ ಸಂಭ್ರಮದಿಂದ ಶಾಲೆಯ ಆವರಣದಲ್ಲಿ ನಡೆಸಲಾಯಿತು.

ಗಣಪತಿಯ ಪ್ರಾರ್ಥನೆಯೊಂದಿಗೆ ಪೂಜಾ ಕಾರ್ಯಕ್ರಮವು ಪ್ರಾರಂಭವಾಯಿತು. ಅರ್ಚಕರಾದ ಸುರೇಂದ್ರ ಜಿ.ಆಚಾರ್ಯ ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಶಾಲೆಯ ವಿದ್ಯಾರ್ಥಿಗಳು ಭಕ್ತಿಪೂರ್ವಕವಾಗಿ ಭಜನೆ ಹಾಗೂ ಕುಣಿತ ಭಜನೆ ನಡೆಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನ್ಯಾ| ಹೆಚ್.ಕೆ ಸುಧಾಕರ ಆರಾಟೆ ಅವರು “ಭಜನೆಯು ಭಕ್ತಿಯ ಉತ್ತಮ ಮಾರ್ಗ ಹಾಗೂ ದೇವರನ್ನು ಭಜನೆಯ ಮೂಲಕ ಭಕ್ತಿಭಾವನೆಯಿಂದ ಆರಾಧಿಸುವುದರಿಂದ ವಿದ್ಯಾಥಿsðಗಳಲ್ಲಿ ಏಕಾಗ್ರತೆ ಮೂಡಿಸಲು ಸಾಧ್ಯವಾಗುವುದು ಎಂದು ಮಕ್ಕಳನ್ನುದ್ದೇಶಿಸಿ ತಿಳಿಸಿದರು.

ಪೂಜಾ ಸಮಾರಂಭದಲ್ಲಿ ಸಂಘದ ಪದಾಧಿಕಾರಿಗಳಾದ ಪ್ರಭಾಕರ ಬೋಳಾರ್, ದೇವದಾಸ್ ಶೆಟ್ಟಿಗಾರ್, ಟಿ.ಆರ್ ಶೆಟ್ಟಿ, ವಿಶ್ವನಾಥ ಶೇಣವ, ಅಶೋಕ ಸಾಲಿಯಾನ್, ದಯಾಸಾದರ್ ಚೌಟ, ಗುಣಕರ ಹೆಗಡೆ, ಮೋಹನ್ ಕಾಂಚನ್, ಯೋಗೇಶ್ ಗುಜರನ್ ಉಪಸ್ಥಿತರಿದ್ದರು.

ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಸುಶೀಲ ಪನ್ವರ್, ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ವಿನೀತ ಖೀರ್, ಮಾಧ್ಯಮಿಕ ವಿಭಾಗದ ಮುಖ್ಯಸ್ಥೆ ಡಾ| ಗೀತಾಂಜಲಿ ಸಾಲಿಯಾನ್, ರಾತ್ರಿ ಕಾಲೇಜ್‌ನ ಮುಖ್ಯಸ್ಥೆ ಸತ್ಯಭಾಮ ನಾಡರ್, ಶಾಲೆಯ ಶಿಕ್ಷಕ ಶಿಕ್ಷಕಿಯರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಪೂಜಾ ಕೈಂಕರ್ಯಗಳನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದರು. ಮಹಾಪೂಜೆ ಹಾಗೂ ಮಹಾಮಂಗಳಾರತಿಯ ನಂತರ ಪ್ರಸಾದ ವಿತರಣೆ ನಡೆಯಿತು.

By suddi9

Leave a Reply

Your email address will not be published. Required fields are marked *