ಸುದ್ದಿ9 ಕೈಕಂಬ: ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಯ ಪಾಡ್ಯಾರ್ ಫ್ರೆಂಡ್ಸ್ ಕ್ಲಭ್ ಇದರ ಸದಸ್ಯರು ಸ್ವಚ್ಚತೆಯನ್ನು ಮಾಡಿದರು.
ನ. 16ರಂದು ಭಾನುವಾರ ಎಡಪದವು ವಿವೇಕಾನಂದ ಕಾಲೇಜು ಎದುರಿನ ರಸ್ತೆಯಿಂದ ಸುಮಾರು 5 ಕಿಲೋಮೀಟರ ವರೆಗೆ ಸ್ವಚ್ಚತೆಯನ್ನು ಮಾಡಿದರು .

ಪಾಡ್ಯಾರ್ ಫ್ರೆಂಡ್ಸ್ ಕ್ಲಭ್ ಅಧ್ಯಕ್ಷ ಜಗದೀಶ್ ಅವರ ನೇತೃತ್ವದಲ್ಲಿ ಸುಮಾರು 25 ಯುವಕರ ತಂಡ ಸ್ವಚ್ಚತೆಯಲ್ಲಿ ಭಾಗಿಯಾಗಿದ್ದರು. ಗ್ರಾಮಪಂಚಾಯತ್ ಅಧ್ಯಕ್ಷರಾದ ರಾಮಚಂದ್ರ ಹಾಗೂ ಪ್ರಸಾದ್ , ಉದಯ, ಸುಕುಮಾರ್ , ಜಯರಾಮ ಮತ್ತಿತರರು ಬಾಗಿಯಾಗಿದ್ದರು.





