ಸುದ್ದಿ9 ಕೈಕಂಬ:ಪೊಳಲಿ ರಾಜಶ್ರೀ ಯುವಕ ಮಂಡಲದ ವತಿಯಿಂದ ಮಹಿಳೆಯರಿಗೆ ಹೂಮಾಲೆ ಕಟ್ಟಲು ತರಭೇತಿ ಶಿಬಿರವೂ ರಾಮಕೃಷ್ಣ ತಪೋವನದಲ್ಲಿ ಭಾನುವಾರ ನಡೆಯಿತು.
ಪೊಳಲಿ ರಾಮಕೃಷ್ಣ ತಪೋವನದಲ್ಲಿ ಬೆಳಗ್ಗೆ 9 ಗಂಟೆಯಿಂದ ಅಪರಾಹ್ನ 1 ಗಂಟೆಯವರಿಗೆ ಗುಡ್ಡ ಪ್ರದೇಶದಲ್ಲಿ ಸಿಗುವ ಕೇಪುಲ ಹೂವು ದಾಸಾವಾಳ, ತುಳಸಿ, ಕಡ್ಲೆ, ಹಿಂಗಾರ ಹಲವು ಬಗೆ ಬಗೆಯ ಹೂವುಗಳನ್ನು ಕಟ್ಟಲು ಮೂಡಬಿದ್ರೆಯ ಸಂಧ್ಯಾ ವಿ. ಕಿಣಿ ಅವರು ಆಗಮಿಸಿದ್ದರು.
ನ.16ರಂದು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಮಾಹಿತಿ ನೀಡಿದ ಸ್ವತಹ ಅವರು ಹೂಮಾಲೆ ಕಟ್ಟಿ ಮಹಿಳೆಯರಿಗೆ ಹೂವು ಕಟ್ಟಲು ಪ್ರೋತ್ಸಹಿಸಿದರು. ಸುಮಾರು 25 ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ರಾಮಕೃಷ್ಣ ತಪೋವನದ ಶ್ರೀಪತಿ ಹಾಗೂ ರಾಜಶ್ರೀ ಯುವಕ ಮಂಡಲದ ಗೌರವಧ್ಯಕ್ಷ ಕೇಶವ ಪೊಳಲಿ , ಕರುಣಾಕರ, ಪ್ರಶಾಂತ್ ,ಶಿವಪ್ರಸಾದ್ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.








