ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದಲ್ಲಿ ಶಾಲಾ ಸಂಸತ್ತಿನ ಮಂತ್ರಿ ಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜೂ.30ರಂದು ಗುರುವಾರ ನಡೆಯಿತು. ಮುಖ್ಯೋಪಾಧ್ಯಾಯರು ಶಾಂಭವಿ ಮಾತಾಜಿ ಸಭಾಪತಿ ಮತ್ತು ಶಾಲೆಯ ಮುಖ್ಯಮಂತ್ರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಉಳಿದ ಮಂತ್ರಿಗಳಿಗೆ ಸಭಾಪತಿಗಳು ಪ್ರಮಾಣ ವಚನ ನಡೆಸಿಕೊಟ್ಟರು. ಶಾಲೆಯ ಸಂಸತ್ತಿನ ಸಭಾಪತಿಯಾಗಿ ಶ್ರೀನಿವಾಸ್ ನಾಯಕ್, ಮನಸ್ವಿ ದೇವಸ್ಯ ಮುಖ್ಯಮಂತ್ರಿಯಾಗಿ, ಶಮನ್ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಕಾರ್ಯಕ್ರಮವನ್ನು ಶಿವರಾಜ್ ಶ್ರೀಮಾನ್ ಹಾಗೂ ಪ್ರಶಾಂತ್ ಶ್ರೀಮಾನ್ ಸಂಯೋಜಿಸಿದರು. ಹಿರಿಯ ಶಿಕ್ಷಕರಾದ ಗೋಪಾಲ್ ಶ್ರೀಮಾನ್ ಇವರು ಉಪಸ್ಥಿತರಿದ್ದರು.
