ಕಲ್ಲಡ್ಕ: ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.11ರಂದು ಶನಿವಾರ ನಡೆದ ಮಂತ್ರಿಮಂಡಲ ಚುನಾವಣೆಗೆ ಸ್ಪರ್ಧೆ ಮತ್ತು ವಿದ್ಯಾರ್ಥಿಗಳಿಂದ ಇವಿಎಂ ಮಾದರಿ ಮತದಾನ ನಡೆಯಿತು.
ಅಭ್ಯರ್ಥಿಗಳು ಎಂಟು ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದು ನಾಲ್ಕು ಮತಗಟ್ಟೆಗಳನ್ನು ರಚಿಸಿ,EVM Appನ್ನು ಬಳಸಿಕೊಂಡುಚುನಾವಣೆ ನಡೆಸಲಾಯಿತು. ಚುನಾವಣಾ ಪೂರ್ವದಲ್ಲಿ ಅಭ್ಯರ್ಥಿಗಳು ನಾಮ ಪತ್ರವನ್ನು ಮುಖ್ಯೋಪಾಧ್ಯಾಯರಿಗೆ ಸಲ್ಲಿಸಿ,ನಾಮಪತ್ರದ ಪರಿಶೀಲನೆಯ ನಂತರ ಅಭ್ಯರ್ಥಿಗಳಿಗೆ ಕೆಲದಿನಗಳ ಕಾಲ ಪ್ರಚಾರಕ್ಕಾಗಿ ಅವಕಾಶ ನೀಡಲಾಯಿತು.
ಮೊದಲಿಗೆ ಶಾಲಾ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು EVMಆ್ಯಪ್ಗೆ ಚಾಲನೆ ನೀಡುವುದರ ಮೂಲಕ ಈ ಮತದಾನ ಪ್ರಕ್ರಿಯೆಯನ್ನು ಉದ್ಘಾಟನೆ ಗೈದರು.
ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕನ ಆಯ್ಕೆ, ಮತದಾನ, ಪ್ರಜಾಪ್ರಭುತ್ವದ ಮಹತ್ವ ಹಾಗೂ ಚುನಾವಣೆ ಪ್ರಕ್ರಿಯೆಯನ್ನು ತಿಳಿಸುದರೊಂದಿಗೆ ಭವಿಷ್ಯದಲ್ಲಿ ಮತದಾನದ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಯಿತು. ಎಲ್ಲಾ ವಿದ್ಯಾರ್ಥಿಗಳು ತಮ್ಮಗುರುತಿನ ಚೀಟಿಯೊಂದಿಗೆ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣಾಅಧಿಕಾರಿಯಾಗಿ ವೇದಾವತಿ ಕೆ ಹಾಗೂ ರಾಜೇಶ್ವರಿ ಎಂ ಕಾರ್ಯನಿರ್ವಹಿಸಿದರು. ಅಧ್ಯಾಪಕ ವೃಂದದವರು ಸಹಕರಿಸಿದರು.

