ಮುಂಬಯಿ : ಬಿಲ್ಲವರ ಚಿಸೋಸಿಯೇಶನ್ ಮುಂಬಯಿ ಇದರ ಬಾಲ ವಿಕಸನ ಉಪ ಸಮಿತಿಯ ಮಾಜಿ ಕರ‍್ಯಾಧ್ಯಕ್ಷೆ, ಸಕ್ರೀಯ ಕರ‍್ಯಕರ್ತೆ, ಸಮಾಜ ಸೇವಕಿ ವಾಸಂತಿ ಸಾಲ್ಯಾನ್‌ಕರ್ (೯೭.) ಜೂ.೧೦ರಂದು ಶುಕ್ರವಾರ ನಿಧನರಾದರು.Vasanti Salyankar

ಮುಂಬಯಿಯ ಸಾಂತಾಕ್ರೂಜ್ ಪಶ್ಚಿಮ ನಿವಾಸಿಯಾಗಿದ್ದು ಮಂಗಳೂರು ಅತ್ತಾವರ ಮೂಲತಃ ಇವರು ದಿ| ಅಚ್ಯುತ ಸಾಲ್ಯಾನ್‌ಕರ್ ಅವರ ಧರ್ಮಪತ್ನಿ. ವಾಸಂತಿ ಸಾಲ್ಯಾನ್‌ಕರ್ ಬಿಲ್ಲವರ ಅಸೋಸಿಯೇಶನ್‌ನ ಮಹಿಳಾ ವಿಭಾಗದಲ್ಲಿ ಸಕ್ರೀಯವಾಗಿ ತೊಡಗಿಸಿದ್ದರು. ಸಾಲ್ಯಾನ್‌ಕರ್ ಪುಟ್ಟರ್ತಿ ಸಾಯಿ ಭಕ್ತೆಯಾಗಿದ್ದು ಸಾಮಾಜಿಕ, ಧಾರ್ಮಿಕ ಕರ‍್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.Vasanti Saliankar late

ಮೃತರು ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ವಾಸಂತಿ ಸಾಲ್ಯಾನ್‌ಕರ್ ನಿಧನಕ್ಕೆ ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಹರೀಶ್ ಜಿ. ಅಮೀನ್ ಹಾಗೂ ಕರ‍್ಯಕಾರಿ ಸಮಿತಿ ಸದಸ್ಯರು ಶೋಕ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *