ಮುಂಬಯಿ: ತುಳುನಾಡಿನ ಪುರಾನ ಪ್ರಾಚೀನ ಅಧಿದೇವತೆ ಎಂದೇ ಪ್ರಸಿದ್ಧಿಯ ಕಾಪು ಅಮ್ಮನ ಸನ್ನಿಧಿಯ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ (ರಿ.) ಇದರಿಂದ ಹೊಸ ಮಾರಿಗುಡಿ ಇದರ ಪ್ರಥಮ ಹಂತದ ಕಾಮಗಾರಿಯು ಭರದಿಂದ ಸಾಗುತ್ತಿದೆ. ಮುಂಬಯಿ ಮಹಾನಗರ ಮತ್ತು ಮಹಾರಾಷ್ಟ್ರದಾದ್ಯಂತ ನೆಲೆಯಾಗಿರುವ ಕಾಪು ಅಮ್ಮನ ಭಕ್ತಾದಿಗಳನ್ನು ಜೊತೆಗೂಡಿಸಿ ಸಮಿತಿ ರಚಿಸುವ ಬಗ್ಗೆ ಸಮಾಲೋಚನಾ ಸಭೆಯನ್ನು ಜೂ.೧೧ರಂದು ಶನಿವಾರ ಅಪರಾಹ್ನ ೩.೩೦ ಗಂಟೆಗೆ ಅಂಧೇರಿ ಪೂರ್ವದ ಚಕಲಾ ಇಲ್ಲಿನ ಹೊಟೇಲ್ ಸಾಯಿ ಪ್ಯಾಲೇಸ್ ಇಲ್ಲಿನ ಆಯೋಜಿಸಲಾಗಿದೆ.
ಭಕ್ತಾಭಿಮಾನಿಗಳೆಲ್ಲರೂ ಸಕಾಲಿಕವಾಗಿ ಆಗಮಿಸಿ ತಮ್ಮ ಸಲಹೆ, ಸೂಚನೆಗಳನ್ನು ನೀಡಿ ಕಾಪು ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ಪರವಾಗಿ ಸುರೇಶ್ ಶೆಟ್ಟಿ ಗುರ್ಮೆ (ಬಳ್ಳಾರಿ) ಈ ಮೂಲಕ ಪ್ರಕಟಣೆಯಲ್ಲಿ ವಿನಂತಿಸಿ ಕೊಂಡಿದ್ದಾರೆ.
