ಮುಂಬಯಿ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇವರು ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಘಟಕ ಇವರ ಸಹಯೋಗದಲ್ಲಿ ಗಡಿನಾಡು ಕನ್ನಡ ಜಾಗೃತಿ ಸಾಂಸ್ಕೃತಿಕ ಉತ್ಸವವು (ಮೇ.೨೭) ದಿನವಿಡೀ ಅಕ್ಕಲಕೋಟ ನಗರದ ಪ್ರಿಯದರ್ಶನಿ ಮಂಗಲ ಕಾರ್ಯಾಲಯದಲ್ಲಿ ಜರಗಿತು.IMG_20220601_104313

ಉದ್ಘಾಟನಾ ಸಮಾರಂಭದಲ್ಲಿ ಹಮ್ಮಿಕೊಂಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗಡಿನಾಡು ಮಾಧ್ಯಮ ಪ್ರಶಸ್ತಿಯನ್ನು ಮುಂಬಯಿಯ ಪತ್ರಕರ್ತ, ಸಾಹಿತಿ ಶ್ರೀನಿವಾಸ ಜೋಕಟ್ಟೆ ಅವರಿಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಅಧ್ಯಕ್ಷ ಡಾ| ಸಿ. ಸೋಮಶೇಖರ ಮತ್ತಿತರ ಗಣ್ಯರೊಂದಿಗೆ ಪ್ರದಾನಿಸಿ ಅಭಿನಂದಿಸಿದರು.

ಶ್ರೀ ಕಬೀರ ಮಹಾಸ್ವಾಮೀಜಿ, ಶ್ರೀ ಬಸವಲಿಂಗ ಮಹಾಸ್ವಾಮೀಜಿ, ್ಯ ಶರಣೆ ಮಹಾನಂದಾತಾಯಿ ಹಿರೇಮಠ ಇವರುಗಳ ದಿವ್ಯ ಉಪಸ್ಥಿತಿಯಲ್ಲಿ ಅಕ್ಕಲಕೋಟ ಶಾಸಕ ಸಚಿನ್ ಕಲ್ಯಾಣಶೆಟ್ಟಿ, ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳಿಯ ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲರಾಜೆ ಭೋಸಲೆ, ಯುವನಾಯಕ ಪ್ರಥಮೇಶ ಮ್ಹೇತ್ರೆ, ಹಿರಿಯ ಸಾಹಿತಿ ಡಾ| ಮಧುಮಾಲ ಲಿಗಾಡೆ, ಸರ್ವಮಂಗಲಾ ಸೋಮಶೇಖರ, ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ ಕಿರಣ ಲೋಹಾರ, ಕಸಾಪ ಕಲಬುರಗಿ ಜಿಲ್ಲಾಧ್ಯಕ್ಷ ವಿಜಯಕುಮಾರ ತೆಗಲತಿಪ್ಪಿ, ಕಸಾಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ, ಶಿಕ್ಷಣ ವಿಸ್ತಾರ ಅಧಿಕಾರಿ ರತಿಲಾಲ ಭೂಸೆ, ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ ಶೇಖ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *