ಮುಂಬಯಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್ ಮುಂಬಯಿ ಘಟಕ ಇದರ ಕಾರ್ಯಕಾರಿ ಸಮಿತಿ ಸದಸ್ಯರು ಪರಿಷತ್ನ ಅಧ್ಯಕ್ಷ ದೇವು ಬಿ.ಪೂಜಾರಿ ಮುಂದಾಳುತ್ವದಲ್ಲಿ ಧರ್ಮಸ್ಥಳಕ್ಕೆ ತೆರಳಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮುಂಬಯಿ ಘಟಕದ ಸ್ಥಾಪನೆ ಬಗ್ಗೆ ಚರ್ಚೆ ನಡೆಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಾಗೇಶ್ ಸುವರ್ಣ, ಗೌರವ ಪ್ರಧಾನ ಕಾರ್ಯಧರ್ಶಿ ರವೀಂದ್ರ ಶಾಂತಿ, ಗೌರವ ಕೋಶಾಧಿಕಾರಿ ಶಾಂತಾರಾಮ್ ಪುತ್ರನ್, ಜೊತೆ ಕೋಶಾಧಿಕಾರಿ ಚಂದ್ರಹಾಸ ರೈ ಹಾಗೂ ಧರ್ಮಸ್ಥಳ ಭಜನಾ ಪರಿಷತಿತ್ತ್ ನ ಪ್ರಧಾನ ಕಾರ್ಯಧರ್ಶಿ ಜೈರಾಮ್ ನೆಲ್ಲಿತಾಯರು ಉಪಸ್ಥಿತರಿದ್ದರು.
