ಮುಂಬಯಿ: ಉಡುಪಿ ಜಿಲ್ಲೆಯ ಬೆಳ್ಮಣ್ ನಂದಳಿಕೆ ಮೂಲದ ಸದ್ಯ ಮೀರಾರೋಡ್ (ದಹಿಸರ್) ನಿವಾಸಿ ಮ್ಯಾಕ್ಸಿಮ್ ಹೆನ್ರಿ ಮಥಾಯಸ್ (೫೪.) ಇವರು ಅಸೌಖ್ಯದಿಂದ ಇಂದಿಲ್ಲಿ ಮಂಗಳವಾರ ಮುಂಜಾನೆ ದಹಿಸರ್ನಲ್ಲಿನ ಸ್ವಗೃಹದಲ್ಲಿ ನಿಧನರಾದರು.
ಬೃಹನ್ಮುಂಬಯಿಯಲ್ಲಿನ ಹೆಸರಾಂತ ರೋಶನ್ ಎಲೆಕ್ಟ್ರಿಕಲ್ಸ್ ಪ್ರೈವೇಟ್ ಲಿಮಿಟೆಡ್, ಮೀರಾರೋಡ್ ಮತ್ತುಉಪನಗರಗಳಲ್ಲಿನ ಲಿಟಲ್ ಕಿಂಗ್ಸ್ ಗ್ರೂಫ್ ಆಫ್ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಹೆನ್ಬ್ರಿಜ್ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದ ಮ್ಯಾಕ್ಸಿಂ ಮಥಾಯಸ್ ಓರ್ವ ಪ್ರಸಿದ್ಧ ಯುವ ಸಮಾಜ ಸೇವಕ, ಕೊಡುಗೈದಾನಿಯಾಗಿ ಜನಾನುರೆಣಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಮೇ.೧೮ರಂದು ಬುಧವಾರ ಸಂಜೆ ಮೀರಾರೋಡ್ ಪೂರ್ವದ ಸೀತಲ್ ನಗರದಲ್ಲಿನ ಸಂತ ಜೋಸೆಫ್’ಸ್ ಇಗರ್ಜಿಯಲ್ಲಿ ಸಂಜೆ ೪.೦೦ ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
