ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ೨೦೨೨-೨೩ನೇ ಶೈಕ್ಷಣಿಕ ವರ್ಷವು ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ‍್ಯಕ್ರಮದೊಂದಿಗೆ ಆರಂಭಗೊಂಡಿತು.

ಹಿರಿಯ ಅಧ್ಯಾಪಕರಾದ ಶ್ರೀ ಗೋಪಾಲ್ ಶ್ರೀಮಾನ್ ಶ್ರೀರಾಮನ ಮೂರ್ತಿಗೆ ದೀಪಬೆಳಗಿಸಿ ಪುಷ್ಪಾರ್ಚನೆಗೈದು ಬುದ್ಧ ಪೂರ್ಣಿಮೆಯ ಶುಭಾಶಯಗಳನ್ನು ತಿಳಿಸಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಆರತಿ ಬೆಳಗಿ,ತಿಲಕಧಾರಣೆ ಮಾಡಿ, ಸಿಹಿ ತಿನ್ನಿಸಿದರು. ಬಳಿಕ ಸರಸ್ವತಿ ವಂದನೆ ಮಧುಕರ ಮಂಟಪದಲ್ಲಿ ನೆರೆವೇರಿತು.

