ಮುಂಬಯಿ: ಉತ್ತರ ಮುಂಬಯಿ ಸಂಸದ ಗೋಪಾಲ ಸಿ.ಶೆಟ್ಟಿ ಅವರು ಎ.21ರಂದು ಗುರುವಾರ ಕರ್ನಾಟಕ ಕರಾವಳಿಯ ಉಡುಪಿಯ ಉಚ್ಚಿಲದಲ್ಲಿ ೩೫ ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದವನ್ನು ಪಡಕೊಂಡರು.Gopal Shetty Varalaxmi Temple A1

ಈ ಸಂದರ್ಭದಲ್ಲಿ ಬಂಟರ ಸಂಘ ಮುಂಬಯಿ ಇದರ ಬೋರಿವಿಲಿ ಶೈಕ್ಷಣಿಕ ಯೋಜನಾ ಸಮಿತಿ ಉಪಾಧ್ಯಕ್ಷ, ಉತ್ತರ ಮುಂಬಯಿ ಜಿಲ್ಲಾ ಭಾರತೀಯ ಜನತಾ ಪಕ್ಷ (ಬಿಜೆಪಿ) ಉಪಾಧ್ಯಕ್ಷ, ಎರ್ಮಾಳ್ ಹರೀಶ್ ಶೆಟ್ಟಿ, ಶ್ರೀ ಮಹಾಲಕ್ಷ್ಮೀ ದೇವಾಲಯ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮತ್ತು ಬ್ರಹ್ಮ ಕಲಶ ಪುಣ್ಯೋತ್ಸವ ಸಮಿತಿ ಅಧ್ಯಕ್ಷ ಡಾ| ಜಿ.ಶಂಕರ್, ಅಧ್ಯಕ್ಷ ಗುಂಡು ಬಿ.ಅಮೀನ್, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಕ್ಷೇತ್ರದ ತಂತ್ರಿ ವಿದ್ವಾನ್ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ, ಹಿರಿಯ ಅರ್ಚಕ ವೆ|ಮೂ| ವೆಂಕಟನರಸಿಂಹ ಉಪಾಧ್ಯಾಯ, ವೆ|ಮೂ| ರಾಘವೇಂದ್ರ ಉಪಾಧ್ಯಾಯ, ವೆ|ಮೂ| ವಿಷ್ಣು ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದು ಸಂಸದರನ್ನು ಗೌರವಿಸಿದರು.Gopal Shetty Varalaxmi Temple A3

By suddi9

Leave a Reply

Your email address will not be published. Required fields are marked *