ಪೊಳಲಿ: ಶ್ರೀ ರಾಜರಾಜೇಶ್ವರಿ ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿ ಪೊಳಲಿ ರಾಮಕೃಷ್ಣ ತಪೋವನದ ಪರಮಪೂಜ್ಯ ಶ್ರೀ ವಿವೇಕ ಚೈತಾನ್ಯಾನಂದ ಸ್ವಾಮೀಜಿಯವರು ಎ.18ರಂದು ಸೋಮವಾರ ಬೇಸಿಗೆ ಶಿಬಿರವನ್ನು ಉದ್ಘಾಟಿಸಿದರು.WhatsApp Image 2022-04-19 at 8.51.52 AM

ಬ್ಯಾಂಕ್ ಆಫ್ ಬರೋಡಾ ಇದರ ಪೊಳಲಿ ಶಾಖಾ ಪ್ರಬಂಧಕರಾದ ಶ್ರೀ ಪುನೀತ್ ಶೆಟ್ಟಿ , ಸಿಬ್ಬಂದಿಗಳಾದ ಶ್ರೀ ಸಂತೋಷ್, ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗೋಪಾಲಕೃಷ್ಣ ಅನಂತಾಡಿ, ಶ್ರೀ ಪ್ರೇಮ್ ನಾಥ್ ಮರ್ಣೆ ಅತಿಥಿಗಳಾಗಿ ಭಾಗವಹಿಸಿದ್ದರು.ಮುಖ್ಯಶಿಕ್ಷಕರಾದ ಶ್ರೀ ರಾಧಾಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಬಿರ ಸಂಯೋಜಕರಾದ ಶ್ರೀ ಮುರಳೀಧರ ಆಚಾರಿಯವರು ವಂದಿಸಿದರು.WhatsApp Image 2022-04-19 at 8.51.36 AM

ದೈಹಿಕ ಶಿಕ್ಷಕ ರಾದ ಶ್ರೀಜಯಂತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ವೆಂಕಟೇಶ್ ನಾವಡ ಶಿಬಿರಕ್ಕೆ ಭೇಟಿ ನೀಡಿ ಪ್ರೋತ್ಸಾಹಿಸಿದರು.ಇನ್ನು ಮೂರು ದಿನಗಳ ಶಿಬಿರ ನಡೆಯಲಿದ್ದು,ರಂಗಕಲೆ,ಕೊಲಾಜ್,ಕರಕುಶಲ ವಸ್ತುಗಳ ತಯಾರಿ, ಗಣಿತ ವಿಜ್ಞಾನ ಮಾದರಿ,ಚೆಸ್ ಮುಂತಾದ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು.WhatsApp Image 2022-04-19 at 8.51.53 AM  WhatsApp Image 2022-04-19 at 8.51.54 AM

By Suddi9

Leave a Reply

Your email address will not be published. Required fields are marked *