ಕೈಕಂಬ :ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಮಾಡ್ಲಾಯ ದೈವಸ್ಥಾನದ ವಾರ್ಷಿಕ ನೇಮವು ಎ.15ರಂದು ಶುಕ್ರವಾರ ನಡೆಯಿತು.
ಮಾಡ್ಲಾಯ ದೈವಸ್ಥಾನದ ಭೂತರಾಜ ಹಾಗೂ ಮಾಡ್ಲಾಯ ದೈವದ ನೇಮವು ವಿಜೃಂಭಣೆಯಿಂದ ನಡೆಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಘು ಎಲ್ ಶೆಟ್ಟಿ, ಬೆಳ್ಳೂರು ಗುತ್ತು ಕೃಷ್ಣ ಪ್ರಸಾದ್ ರೈ , ಉಮೇಶ್ ಶೆಟ್ಟಿ, ಸಚ್ಚೀಂದ್ರನಾಥ್ ಭಂಡಾರಿ, ಮೋಹನ್ ದಾಸ್ ಮೇಲಾಂಟ, ಕರುಣಾಕರ ಶೆಟ್ಟಿ, ಸೀತಾರಾಮ ಪೂಂಜ, ದೇವಪ್ಪ ಪೂಜಾರಿ ಬಾಳಿಕೆ, ಜಯರಾಮ ಶೆಟ್ಟಿ ದಾಸಕೋಡಿ, ಚಂದ್ರಶೇಖರ ಅಜಿಲ ,ನಂದರಾಮ ರೈ, ಗಂಗಾಧರ ಪೂಜಾರಿ ಕೊಪ್ಪಲ, ಸವಿತಾ ಎನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

