ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಮೇ.02 ರಿಂದ ಮೇ.05ರ ತನಕ ಬೆಳಿಗ್ಗೆ 9.30ರಿಂದ ಸಂಜೆ 4.30 ರತನಕ ಉಚಿತ ಬೇಸಿಗೆಯ ಮಕ್ಕಳ ಚೈತನ್ಯ ಶಿಬಿರ ನಡೆಯಲಿದೆ. 10 ವರ್ಷದಿಂದ 18 ವರ್ಷ ವಯಸ್ಸಿನ ಒಳಗಿನ ಮಕ್ಕಳಿಗೆ ಸುವರ್ಣಾವಕಾಶ. ಇದರಲ್ಲಿ ಮಕ್ಕಳ ಬುದ್ದಿಮತ್ತೆಯ ಸಂವರ್ಧನೆಗಾಗಿ ವಿವಿಧ ಪ್ರಶಿಕ್ಷಣಗಳನ್ನು ಆಯೋಜಿಸಲಾಗಿದೆ.

  • ಯೋಗ, ಸೂರ್ಯನಮಸ್ಕಾರ ಮತ್ತು ಪ್ರಾಣಾಯಾಮ, ಕರಾಟೆ, ವಿವಿಧ ಕರ ಕೌಶಲ್ಯ
  • ವಿವಿಧ ಆಟ, ಕ್ರೀಡೆ- ಒಳಾಂಗಣ ಮತ್ತು ಹೊರಾಂಗಣದ ಆಟಗಳು.
  • ಶಾಸ್ತ್ರೀಯ ಸಂಗೀತ.
  • ಆಧ್ಯಾತ್ಮಿಕತೆ, ಧ್ಯಾನ, ಭಜನೆ. ವ್ಯಕ್ತಿತ್ವ ವಿಕಸನದ (ತರಬೇತಿ).
  • ಭಾಷಣ, ಚರ್ಚಾಕೂಟ, ಪ್ರಬಂಧ ಸ್ಪರ್ಧೆಯ (ತರಬೇತಿ), ಚುಟುಕು ಪ್ರಶೋತ್ತರ
  • ಭವಿಷ್ಯ ನಿರೂಪಣೆಯ ಮಾರ್ಗದರ್ಶನ. ವೈದ್ಯಕೀಯ ಸಲಹೆ ಅಂತೆಯೇ ಆರೋಗ್ಯದ ಬಗ್ಗೆ ವೈದ್ಯರಿಂದಲೇ ಮಾರ್ಗದರ್ಶನ.
  • ಸ್ವಚ್ಚ ಭಾರತ ಅಭಿಯಾನ- ಶುಚಿತ್ವ, ಆರೋಗ್ಯ ಮತ್ತು ರಕ್ಷಣೆ. ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳ ಪಾತ್ರ

By Suddi9

Leave a Reply

Your email address will not be published. Required fields are marked *