ಮುಂಬಯಿ : ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ತ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ನಾವು ಸೌಹಾರ್ದ ಪ್ರಿಯರು ಎಂಬ ಧ್ಯೇಯ ವಾಕ್ಯದೊಂದಿಗೆ ಆದರ್ಶ ಸಂಗೀತ ಅಕಾಡೆಮಿ ಟ್ರಸ್ಟ್ ಬೆಂಗಳೂರು ಹಾಗೂ ಚಂದನ ಸಾಹಿತ್ಯ ವೇದಿಕೆ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ೨೯ನೇ ಅಂತಾರಾಷ್ಟ್ರೀಯ ವಿಹಾರ ನೌಕೆ  ಸಾಂಸ್ಕೃತಿಕ ಸೌರಭ ಕಾರ್ಯಕ್ರಮವು ಮಂಗಳೂರು ಬೊಕ್ಕಪಟ್ಟಣದ ಅಬ್ಬಕ್ಕ ನೌಕೆಯ ವೇದಿಕೆಯಲ್ಲಿ ಅರ್ಥಪೂರ್ಣವಾಗಿ ಜರುಗಿತು.Abbakka Samskrutika Saurabha

ಕರ್ನಾಟಕ ಸರಕಾರದ ಅನಿವಾಸಿ ಕನ್ನಡಿಗರ ಕೋಶ ಇದರ ಮಾಜಿ ಉಪಾಧ್ಯಕ್ಷ ಕ್ಯಾ| ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನ್‌ಆಡಿ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ ಸಂಗೀತ ಉಳಿಸಲು ಎಡೆಬಿಡದೆ ಕಾರ್ಯಕ್ರಮಗಳನ್ನು ಆಯೋಜಿಸಿ ನಮ್ಮ ಪರಂಪರೆಗಳನ್ನು ಉಳಿಸಲು ಪ್ರಯತ್ನಿಸಬೇಕು. ಯುವಜನತೆ ಎಲ್ಲಾ ಪ್ರಕಾರದ ಕಲೆಗಳಲ್ಲಿ ತೊಡಗಿಕೊಂಡು  ಸಾಂಸ್ಕೃತಿಕ ಲೋಕವನ್ನು ಬೆಳಗಿಸಬೇಕು ಎಂದರು.

ಡಾ| ಮನೋಜ್ ಶರ್ಮ ಗುರೂಜಿ ಸಾನಿಧ್ಯ ವಹಿಸಿದ್ದರು. ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಹೆಚ್. ಭೀಮರಾವ್ ವಾಷ್ಠರ್, ಆದರ್ಶ ಸಂಗೀತ ಅಕಾಡೆಮಿ ಟ್ರಸ್ಟ್ನ ಅಧ್ಯಕ್ಷ ಡಾ| ಕಿಕ್ಕೇರಿ ಕೃಷ್ಣಮೂರ್ತಿ, ಬೆಂಗಳೂರು ವಾಟಿಕಾ ಕ್ಲಬ್ ಮತ್ತು ರೆಸಾರ್ಟ್ನ ಆರ್.ಕಾರ್ತಿಕ್ ರೆಡ್ಡಿ, ಡಾ| ಎಸ್.ಎಂ ಶಿವಪ್ರಕಾಶ್, ಪ್ರೊ| ಪಿ.ಎಲ್ ಧರ್ಮ, ಗೋಪಾಲ್ ಡಿ.ರಾಥೋಡ್ ಅತಿಥಿಗಳಾಗಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷವಾಗಿ ಸಾಧನೆ ಮಾಡಿದ ಡಾ| ಎಸ್.ಎಂ ಗೋಪಾಲಕೃಷ್ಣ ಆಚಾರ್ಯ, ಗೋಪಾಲಕೃಷ್ಣ ರಾಠೋಡ್ ಚಿತ್ತಾಪುರ, ಡಾ| ಬಿ.ಕೆ ಮೋನಪ್ಪ ಆಚಾರ್ಯ,ಹೆಚ್ .ಭೀಮರಾವ್ ವಾಷ್ಠರ್ ಸುಳ್ಯ, ಮಿತ್ರದೇವ ಮಡಪ್ಪಾಡಿ, ಡಾ| ಮನೋಜ್ ಶರ್ಮ ಗುರೂಜಿ, ಗೋಪಾಲಕೃಷ್ಣ ಭಟ್ ಕಟ್ಟತ್ತಿಲ ಅವರಿಗೆ ಐಕಾನಿಕ್ ಆಫ್ ಇಂಡಿಯಾ ಅವಾರ್ಡ್ ರಾಷ್ಟçಪ್ರಶಸ್ತಿ, ನಾರಾಯಣ ನಾಯ್ಕ ಕುದುಕೋಳಿ ಮತ್ತು ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಅವರಿಗೆ ಸಿರಿಕನ್ನಡ ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಿ ಗೌರವಿಸಲಾಯಿತು. ಅಂತೆಯೇ ಪ್ರಸಿದ್ಧ ತಾರಸಿ ಕೃಷಿಕ ಕೃಷ್ಣಪ್ಪಗೌಡ ಪಡ್ಡಂಬೈಲ್ ಅವರನ್ನೂ ಗಣ್ಯರು ಸಮ್ಮಾನಿಸಿ ಅಭಿನಂದಿಸಿ ಭೀಮರಾವ್ ವಾಷ್ಠರ್ ಸಾಹಿತ್ಯ ರಚಿಸಿ ಹಾಡಿದ ಶ್ರೀ ಸಜ್ಜಲಾಂಬೆ ಶರಣಮ್ಮ ದೇವಿ ಭಕ್ತಿಗೀತೆ ಆಲ್ಬಮ್‌ನ್ನು ಬಿಡುಗಡೆ ಗೊಳಿಸಿದರು.

ಸರೋಜಾರಾವ್ ಮತ್ತು ತಂಡದ ಪ್ರತಿಭಾ ಸಾಲಿಯಾನ್, ಸ್ಮಿತಾ ಮಹೇಶ್, ರೇಶ್ಮಾ ಮೊರಸ್ ಅವರಿಂದ ಜಾನಪದ ನೃತ್ಯ ನಡೆಯಿತು. ಡಾ| ಕಿಕ್ಕೇರಿ ಕೃಷ್ಣಮೂರ್ತಿ, ಭೀಮರಾವ್ ವಾಷ್ಠರ್, ಶೀಲಾ ಪಡೀಲ್, ಶಿವರಾಜ್ ಪಾಂಡೇಶ್ವರ್ ಇನ್ನಿತರರು ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಅಧ್ಯಕ್ಷ ಹಾಗೂ ಪ್ರಸಿದ್ಧ ಸಾಹಿತಿ ಮತ್ತು ಜ್ಯೋತಿಷಿ ಭೀಮರಾವ್ ವಾಷ್ಠರ್ ಅಧ್ಯಕ್ಷತೆಯಲ್ಲಿ ಸಾಗರ ಕವಿಗೋಷ್ಠಿ ನಡೆಸಲ್ಪಟ್ಟಿದ್ದು ಶಿವಣ್ಣ ಶೀತರ್ ಮೈಸೂರ್, ಮಮತಾ ಅರಸೀಕೆರೆ, ಪೆರುಮಾಳ್ ಲಕ್ಷ್ಮಣ್ ಐವರ್ನಾಡು, ಜ್ಯೋತಿಲಕ್ಷ್ಮಿ ಕೂಟೇಲು, ಪೂರ್ಣಿಮಾ ಪೆರ್ಲಪಾಡಿ, ನಾರಾಯಣ ನಾಯ್ಕ ಕುದುಕೋಳಿ ಮತ್ತು ಗೋಪಾಲ್ ಕೃಷ್ಣ ಭಟ್ ಕಟ್ಟತ್ತಿಲ ಭಾಗವಹಿಸಿ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು.

ಮೀನಾಕ್ಷಿ ಕುದುಕೋಳಿ ಮತ್ತು ಗೀತಾಕುಮಾರಿ ಪ್ರಾರ್ಥನೆ ಹಾಡಿದರು. ಐಎನ್‌ಸಿಅಫ್‌ಸಿಐ ಅಧ್ಯಕ್ಷರಾದ ಇಂ| ಕೆ.ಪಿ ಮಂಜುನಾಥ್ ಸಾಗರ್ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಕೃತಿ ಭಟ್ ಮಂಗಳೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು .

By suddi9

Leave a Reply

Your email address will not be published. Required fields are marked *