ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಮಾ.20ರಂದು ಭಾನುವಾರ ಮಧ್ಯಾಹ್ನ ೨.೩೦ ಕ್ಕೆ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ನಡೆಯಿತು. ೨.೩೦ ರಿಂದ ೩.೧೫ ರವರೆಗೆ ಲತೀಶ್ ಮತ್ತು ಬಳಗದವರಿಂದ ಭಜನೆ ಇತ್ತು.
ಅನಂತರ ಸಭಾ ಕಾರ್ಯಕ್ರಮದಲ್ಲಿ ಮಂಗಳೂರಿನ ರಾಮಕೃಷ್ಣ ಮಠದ ಪೂಜ್ಯ ಸ್ವಾಮಿ ರಘುನಂದಜಿ ಮಹರಾಜ್ ಮತ್ತು ಪ್ರೊ. ಡಾ| ಚಕ್ರಪಾಣಿ ಎಚ್ಒಡಿ ಮೆಡಿಸಿನ್ ಕೆ.ಎಂ.ಸಿ. ಆಸ್ಪತ್ರೆ, ಮಂಗಳೂರು ಇವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆಯ ಅತಿಥಿಗಳಾಗಿ ಆಗಮಿಸಿದ್ದರು.
ಸ್ವಾಮಿ ವಿವೇಕಚೈತನ್ಯಾನಂದ ಅವರು ವಿದ್ಯಾರ್ಥಿವೇತನ ಮತ್ತು ಇತರ ವಿಧಾನಗಳ ಮೂಲಕ ವಿದ್ಯಾರ್ಥಿಗಳನ್ನು ಬೆಂಬಲಿಸುವ ಉದ್ದೇಶಿಸಿ ಸಂಕ್ಷಿಪ್ತ ಟಿಪ್ಪಣಿ ನೀಡಿದರು. ಪೂಜ್ಯ ರಘುರಾಮಾನಂದಜಿ ಮಹರಾಜ್ ತಮ್ಮ ಆಶೀರ್ವಚನದಲ್ಲಿ ಸ್ಫೂರ್ತಿದಾಯಕ ಭಾಷಣ ಮಾಡಿದರು. ಡಾ| ಚಕ್ರಪಾಣಿಯವರು ಈ ಸಂದರ್ಭದಲ್ಲಿ ಚೆನ್ನಾಗಿ ಮಾತಾಡಿದರು. ೧೩೬ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.. ಸಾಂಕೇತಿಕವಾಗಿ ೨೯ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಲಾಯಿತು. ಅನಂತರ ಬಂದವರಿಗೆಲ್ಲಾ ಉಪಾಹಾರ ವಿತರಿಸಲಾಯಿತು.
