ಮುಂಬಯಿ : ಶ್ರೀ ರಜಕ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ತನ್ನ ೫ ಪ್ರಾದೇಶಿಕ ವಲಯದ ಮಹಿಳಾ ವಿಭಾಗದ ಸಹಭಾಗಿತ್ವದೊಂದಿಗೆ ಜಾಗತಿಕ ಮಹಿಳಾ ದಿನಾಚರಣೆಯನ್ನು ಇದೇ ಮಾ.೨೦ರಂದು ಭಾನುವಾರ ಅಪರಾಹ್ನ ೩.೦೦ ಗಂಟೆಯಿಂದ ಆಚರಿಸಲಿದೆ.
ಕಾರ್ಯಕ್ರಮವು ಮಾ.೨೦ನೇ ರವಿವಾರ ಸಂಜೆ ೩.೦೦ ಗಂಟೆಯಿಂದ ವಿಕ್ರೋಲಿ ಪೂರ್ವದಲ್ಲಿರುವ ವೀಕೆಸ್ ಇಂಗ್ಲೀಷ್ ಹೈಸ್ಕೂಲಿನ ಸಭಾಂಗಣ, ಪಿ.ಎಂ.ಸಿ ಬ್ಯಾಂಕ್‌ನ ಸಮೀಪ, ಟಾಗೋರ್ ನಗರ ರೋಡ್, ಮುಂಬಯಿ ಇಲ್ಲಿ ಜರುಗಿಸಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಮತಿ ಶಾರದಾ ಅಂಚನ್ (ಲೇಖಕಿ) ಆಗಮಿಸಲಿದ್ದು ಮಹಿಳಾ ದಿನಾಚರಣೆಯ ಅಂಗವಾಗಿ, ವಿಶೇಷವಾಗಿ ಸಮಾಜದ ಇಬ್ಬರು ಸಾಧಕ ಮಹಿಳೆಯರಾದ ಲಲಿತ ಸುಂದರ್ ಸಾಲಿಯಾನ್ ಮತ್ತು ಪ್ರಮೀಳ ಗಣೇಶ್ ಸಾಲಿಯಾನ್ ಇವರನ್ನು ಸನ್ಮಾನಿಸಲಾಗುವುದು. ಅಲ್ಲದೆ ಹಲವಾರು ರೀತಿಯ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಆ ಪ್ರಯುಕ್ತ ಮುಂಬಯಿಯ ಎಲ್ಲಾ ವಲಯಗಳಲ್ಲಿ ನೆಲೆಸಿರುವ ರಜಕ ಸಮಾಜದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೋರಂಜಿತರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ರಜಕ ಸಂಘ ಮುಂಬಯಿಯ ಮಹಿಳಾ ವಿಭಾಗವು ಪ್ರಕಟಣೆಯಲ್ಲಿ ತಿಳಿಸಿದೆ.
