ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಹಯೋಗದಲ್ಲಿ ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ (ರಿ.) ಮುಂಬಯಿ ಸಂಸ್ಥೆಯು ಮಾ.19ರಂದು ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿನ ಗುರು ನಾರಾಯಣ ಸಭಾಗೃಹದಲ್ಲಿ ಹರಿಕಥಾ ಗೀತಾಸಾರ ಕಾರ್ಯಕ್ರಮ ನಡೆಸಿತು.
Thonse Baidarkala Garodi (Harikatha) 1

Thonse Baidarkala Garodi (Harikatha) 2

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅಮೀನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್, ಗರೋಡಿ ಸೇವಾ ಟ್ರಸ್ಟ್ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ, ಉಪಾಧ್ಯಕ್ಷರುಗಳಾದ ಡಿ.ಬಿ ಅಮೀನ್, ವಿಶ್ವನಾಥ ತೋನ್ಸೆ, ವೇದಿಕೆಯಲ್ಲಿದ್ದು ಕಲಾವಿದರನ್ನು ಗೌರವಿಸಿ ಅಭಿವಂದಿಸಿದರು.Thonse Baidarkala Garodi (Harikatha) 3  Thonse Baidarkala Garodi (Harikatha) 4

ತುಳುನಾಡಿನ ಯೋಧರಾಗಿದ್ದು ದೈವರೆಣಿಸಿ ಆರಾಧಿಸಿಕೊಂಡು ಬರುವ ಕೋಟಿ ಚೆನ್ನಯ ಅವಳಿ ವೀರರ ಜೀವನ ಚರಿತ್ರೆಯು ಭಾವೀ ಯುವ ಜನಾಂಗಕ್ಕೆ ಆಗಬೇಕು. ಜಾಗತಿಕ ಬದಲಾದ ಸನ್ನಿವೇಶದಲ್ಲಿ ಯುವಜನತೆಯನ್ನು ಆಕರ್ಷಿಸಲು ಇಂಗ್ಲೀಷ್‌ನಲ್ಲೂ ಇಂತಹ ಹರಿಕಥಾ ಪ್ರಯೋಗಗಳು ಆದಲ್ಲಿ ಕೋಟಿ ಚೆನ್ನಯರ ಸಮಾಜಮುಖಿ ಕೆಲಸಗಳು ಸುಲಭವಾಗಿ ಅರ್ಥೆÊಸಿ ಕೊಳ್ಳಬಹುದು ಎಂದು ಹರೀಶ್ ಜಿ.ಅಮೀನ್ ತಿಳಿಸಿದರು.Thonse Baidarkala Garodi (Harikatha) 5  Thonse Baidarkala Garodi (Harikatha) 6

ಕಲಾಸಾರಥಿ, ಹರಿದಾಸ ತೋನ್ಸೆ ಪುಷ್ಕಳ ಕುಮಾರ್ ಇವರು ಕೋಟಿ ಚೆನ್ನಯರ ಜೀವನ ಚರಿತ್ರೆ ಆಧಾರಿತ ಹರಿಕಥಾ ಗೀತಾಸಾರ ಪ್ರಸ್ತುತ ಪಡಿಸಿದರು. ಸಹ ಕಲಾವಿದರಾಗಿದ್ದು ಶೇಖರ್ ಸಸಿಹಿತ್ಲು (ಹಾರ್ಮೋನಿಯಂ) ಮತ್ತು ಜನಾರ್ದನ ಸಾಲ್ಯಾನ್ (ತಬಲಾ) ಸಾಧನ ವಾದಕರಾಗಿ ಸಹಕರಿಸಿದರು.Thonse Baidarkala Garodi (Harikatha) 7  Thonse Baidarkala Garodi (Harikatha) 8

ಕಾರ್ಯಕ್ರಮದಲ್ಲಿ ಸೇವಾ ಟ್ರಸ್ಟ್ನ ಗೌ| ಪ್ರ| ಕೋಶಾಧಿಕಾರಿ ರವಿರಾಜ್ ಕಲ್ಯಾಣ್ಫುರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಉದಯ ಎನ್.ಪೂಜಾರಿ, ಸದಾನಂದ ಪೂಜಾರಿ ಸೇರಿದಂತೆ ಸದಸ್ಯರನೇಕರು ಹಾಜರಿ ದ್ದು ಹರೀಶ್ ಜಿ.ಸಾಲ್ಯಾನ್ ಸ್ವಾಗತಿಸಿದರು. ನಿತ್ಯಾನಂದ ಡಿ.ಕೋಟ್ಯಾನ್ ಪ್ರಸ್ತಾವನೆಗೈದರು. ಡಿ.ಬಿ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ತೋನ್ಸೆ ಅವರು ಪುಷ್ಕಳರನ್ನು ಪರಿಚಯಿಸಿ ವಂದಿಸಿದರು.Thonse Baidarkala Garodi (Harikatha) 9

By suddi9

Leave a Reply

Your email address will not be published. Required fields are marked *