ಬಂಟ್ವಾಳ : ತಾಲ್ಲೂಕಿನ ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಮಾ.09ರಂದು ಬುಧವಾರ ನಡೆದ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್ ನೇತೃತ್ವದ ಸದಸ್ಯರು ಗೆಲುವು ಸಾಧಿಸಿದರು.
ಇಲ್ಲಿನ ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್ ನೇತೃತ್ವದ ಅಭ್ಯರ್ಥಿಗಳ ತಂಡ ಅವಿರೋಧ ಆಯ್ಕೆಯಾಗಿದೆ.
ನೆಲ್ಲಿಗುಡ್ಡೆ ಕಳಾಯಿ ಚಂದ್ರಮೌಳೀಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಇವರ ವಿರುದ್ಧ ಇತರ ನಾಮ ಪತ್ರ ಸಲ್ಲಿಕೆಯಾಗದ ಪರಿಣಾಮ ಚುನಾವಣೆ ರದ್ದುಗೊಂದು ಎಲ್ಲಾ ೧೨ ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗಿದೆ. ಎನ್.ಜೆ. ಗೋಪಾಲ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಇದೇ ವೇಳೆ ಸಂಘದ ಅಧ್ಯಕ್ಷರಾಗಿ ಬಿ.ಪದ್ಮಶೇಖರ ಜೈನ್ ಮತ್ತು ಉಪಾಧ್ಯಕ್ಷರಾಗಿ ಸದಾಶಿವ ಪ್ರಭು ಆಯ್ಕೆಗೊಂಡರು. ನಿರ್ದೇಶಕರಾಗಿ ಮಾರಪ್ಪ ಪೂಜಾರಿ, ಲಿಂಗಪ್ಪ ಬಂಗೇರ, ಆನಂದ ಬಂಗೇರ, ಬಾಲಕೃಷ್ಣ ಶೆಟ್ಟಿ.ಪಿ., ಕಿಶೋರ್ ಶೆಟ್ಟಿ, ಉಮೇಶ್ ನಾಯಕ್, ಜಯರಾಮ ನಾಯ್ಕ್, ನೀಲಯ್ಯ ಪೂಜಾರಿ, ಸುಜಾತಾ, ಮೋಹಿನಿ ಮತ್ತು ಸಂಘದ ಕಾರ್ಯದರ್ಶಿ ವೇದಾವತಿ ಇದ್ದರು.
