ಬಂಟ್ವಾಳ: ಪ್ರತಿಷ್ಠಿತ ಬಂಟ್ವಾಳ ತಾಲೂಕಿನ ಕೈರಂಗಳದ ಶ್ರೀ ಕೃಷ್ಣ ಗೇಮ್ಸ್ ಕ್ಲಬ್ ಕೈರಂಗಳ ಫೆ.27ರಂದು ಭಾನುವಾರ ಕೈರಂಗಳ ಶಾಲಾ ಮೈದಾನದಲ್ಲಿ ಅಯೋಜಿಸಿದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ನರಿಂಗಾನ ಯುವಕ ಮಂಡಲ ನಿರೀಕ್ಷೆಯಂತೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಸಫಲವಾಯಿತು.
ಇಲ್ಲಿ ನಡೆದ ಪ್ರತಿಯೊಂದು ಪಂದ್ಯಗಳೂ ಬಹಳಷ್ಟು ರೋಚಕತೆಯಿಂದ ಕೂಡಿತ್ತು. ಸೆಮಿಫೈನಲ್ ತಲುಪಿದಂತಹ ನಾಲ್ಕು ಬಲಿಷ್ಠ ತಂಡಗಳಂತೂ ನೆರೆದ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತಹ ಪ್ರದರ್ಶನವನ್ನು ನೀಡುವಲ್ಲಿ ಸಫಲವಾಗಿದೆ.
ಪ್ರಥಮ ಸೆಮಿಫೈನಲ್ ನಲ್ಲಿ ರಾಷ್ಟ್ರೀಯ ಆಟಗಾರರನ್ನು ಒಳಗೊಂಡ ಬಯಲ ಪ್ರೆಂಡ್ಸ್ ತಂಡ ಕೇರಳ ಆಟಗಾರರನ್ನು ಒಳಗೊಂಡ ಬಲಿಷ್ಠ ಫ್ರೆಂಡ್ಸ್ ಫೋರೇವರ್ ತಂಡವನ್ನು 2:1 ಸೆಟ್ ನಿಂದ ಗೆದ್ದು ಫೈನಲ್ ಪ್ರವೇಶ ಪಡೆಯಿತು. ಅನುಷ್ ಸುವರ್ಣ, ಹಯಾನ್ ಕಾರ್ಕಳ ಮತ್ತು ಸರ್ಫರಾಝ್ ರವರ ಕೈಚಳಕ ಫೈನಲ್ ಪ್ರವೇಶ ಪಡೆಯಲು ಸಹಕಾರಿಯಾಯಿತು.
ಇನ್ನೊಂದು ಸೆಮಿಫೈನಲ್ ಪಂದ್ಯ ಪಂದ್ಯಾವಳಿಯು ಫೈನಲ್ ಎಂಬ ರೀತಿಯಲ್ಲಿ ಶ್ರೀ ಕೃಷ್ಣ ಗೇಮ್ಸ್ ಕ್ಲಬ್ ಕೈರಂಗಳ ಹಾಗೂ ರಾಜ್ಯದ ನುರಿತ ಆಟಗಾರರನ್ನು ಒಳಗೊಂಡ ಯುವಕ ಮಂಡಲ ನರಿಂಗಾನ ಸೆಣೆಸಾಟ ನಡೆಸಿ 13:15. 15:13 27:25 ರಲ್ಲಿ ಯುವಕ ಮಂಡಲ ಬಹಳ ತಂಡ 26ರ ತನಕ ಸಾಗಿ ಕೈರಂಗಳವನ್ನು ಸೋಲಿಸಿ ಫೈನಲ್ ಪ್ರವೇಶ ಪಡೆಯಿತು, ಪಂದ್ಯಾಟವಂತೂ ಸ್ಮರಣೀಯವಾಗಿತ್ತು.
ಅತ್ಯಂತ ಕುತೂಹಲಕಾರಿಯಾಗಿ ನಡೆದ ಪಂದ್ಯದಲ್ಲಿ ಕೈರಂಗಳದ ಪ್ರತಿಯೊಬ್ಬ ಆಟಗಾರನೂ ಎದುರಾಳಿ ತಂಡಕ್ಕೆ ಪ್ರತಿರೋಧ ಒಡ್ಡುವಲ್ಲಿ ಯಶ ಕಂಡರು, ಅದರಲ್ಲಿ ರಾಕೇಶ್ ಕೈರಂಗಳ ರವರ ಮಿಂಚಿನ ವೇಗದ ಸರ್ವಿಸ್ ಗಳು ಎದುರಾಳಿ ತಂಡವನ್ನು ಬೆಚ್ಚಿ ಬೀಳಿಸುವಂತೆ ಮಾಡಿತು, ನಿಖಿಲ್, ಖಲೀಲ್, ರಿಶಿ, ನಬೀಲ್, ಹಾರಿಶ್ ಅವರ ಪ್ರದರ್ಶನ ಅಮೋಫವಾಗಿತ್ತು ಕೊನೆಯಲ್ಲಿ ರಾಜ್ಯದ ನುರಿತ ಆಟಗಾರರಾದ ರಾಖೇಶ್ ಚಿಕ್ಕಮಂಗಳೂರು, ನವೀದ್ ಭಟ್ಕಳ್, ಅಕ್ಷಯ್ ಬೋಳ, ಸಯ್ಯದ್, ದೀಕ್ಷಿತ್,ಸುಹೈಲ್, ಝಿಯಾ ಮಂತಾದ ಅನುಭವಿ ಆಟಗಾರರ ತಂಡದ ಮುಂದೆ ಮಂಡಿಯೂರ ಬೇಕಾಯಿತು.
ಫೈನಲ್ ಪಂದ್ಯದಲ್ಲಿ ಯುವಕ ಮಂಡಲ ನರಿಂಗಾನ ತಂಡ ಬಯಲ್ ಫ್ರೆಂಡ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಮೂಡಿಬಂತು. ಸೆಮಿಯಲ್ಲಿ ಸಿಕ್ಕ ರೋಮಾಂಚಕಾರಿ ಅನುಭವ ಪೈನಲ್ ಲ್ಲಿ ಪ್ರೇಕ್ಷಕರಿಗೆ ಸಿಕ್ಕಿಲ್ಲ. ಉತ್ತಮ ಪಾಸರ್ ಆಗಿ ಬಯಲ್ ಫ್ರೆಂಡ್ಸ್ ತಂಡದ ಸರ್ಫರಾಝ್ ಮಂಗಳೂರು, ಹೊಡೆತಗಾರನಾಗಿ ಯುವಕ ಮಂಡಲ ನರಿಂಗಾನ ತಂಡದ ರಾಕೇಶ್ ಚಿಕ್ಕಮಂಗಳೂರು, ಸವ್ಯಸಾಚಿಯಾಗಿ ಶ್ರೀ ಕೃಷ್ಣ ಗೇಮ್ಸ್ ಕ್ಲಬ್ ಕೈರಂಗಳ ತಂಡದ ರಾಕೇಶ್ ಕೈರಂಗಳ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು.
ಪಂದ್ಯಾಕೂಟದಲ್ಲಿ ಶಿಸ್ತಿನ ಆಟವನ್ನು ಪ್ರದರ್ಶಿಸಿದ ಕಾಡುಮಠ ತಂಡದ ಧನುಷ್ ಶೆಟ್ಟಿಯವರು ವಾಲಿಬಾಲ್ ಪ್ರೇಮಿಗಳು ಮತ್ತು ಪಂದ್ಯಾಕೂಟದ ಪ್ರತಿಯೊಬ್ಬ ಆಟಗಾರರಿಂದ ಶಹಬ್ಬಾಶ್ ಗಿರಿಯನ್ನು ಪಡೆದುಕೊಂಡರು. ಅಂತೂ ನರಿಂಗಾನ ಯುವಕ ಮಂಡಲ ಕೆಲವು ವರ್ಷಗಳ ಬಳಿಕ ವಾಲಿಬಾಲ್ ನ ಗತವೈಭವ ತೋರಿಸಿತ್ತು. ಶ್ರೀಕೃಷ್ಣ ಗೇಮ್ಸ್ ಕ್ಲಬ್ ಗಾಗಿ ದುಡಿದು, ಇಹಲೋಕ ತ್ಯಜಿಸಿದ ಗಣ್ಯರನ್ನು ಸ್ಮರಿಸುವ ನೆಲೆಯಲ್ಲಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಅವರ ಹೆಸರನ್ನು ಚಿರಸ್ಥಾಯಿಯಾಗುವಂತೆ ಶ್ರೀಕೃಷ್ಣ ಗೇಮ್ಸ್ ಕ್ಲಬ್ ಮಾಡಿದ್ದು ಅಭಿನಂದನೀಯ.
