ಮಂಗಳೂರು :ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಫೆ 28 ರಂದು ಮಧ್ಯಾಹ್ನ 3ಗಂಟೆಗೆ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಮಂಗಳೂರಿನಲ್ಲಿ ಕಾರ್ಡೇಲ್ ಚರ್ಚ್ ಹಾಲ್ ಮೈದಾನದಲ್ಲಿ ನಡೆಯುವ ಸಮಾರಂಭ ದಲ್ಲಿ ನೂತನ ರಸ್ತೆಯ ಲೋಕಾರ್ಪಣೆ ಹಾಗು ಹಲವಾರು ರಸ್ತೆ ಯೋಜನೆಗಳನ್ನು ಅವರು ಘೋಷಿಸಲಿದ್ದಾರೆ. ಮಂಗಳೂರು ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮೀನ ಮೇಷದ ನಡುವೆ ಸಚಿವರ ಮಂಗಳೂರು ಭೇಟಿ ಕುತೂಹಲ ಮೂಡಿಸಿದೆ.
