ನವದೆಹಲಿ : ದೇಶದ ಜನರೆ ನಂಬಿಕೆ ಇಡಿ ಕಪ್ಪು ಹಣ ವಾಪಾಸು ತರುತ್ತೇವೆ ಎಂದು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಅವರು ಭಾನುವಾರ ಬೆಳಗ್ಗೆ 11 ಗಂಟೆಯಿಂದ ಆಕಾಶವಾಣಿಯಲ್ಲಿ ಪ್ರಸಾರವಾದ ಮನ್ ಕೀ ಬಾತ್ ಭಾಷಣದಲ್ಲಿ ದೇಶದ ಜನರೊಂದಿಗೆ ಅನೇಕ ವಿಷಯಗಳನ್ನು ಹಂಚಿಕೊಂಡರು.
ಪ್ರಧಾನಿಯಾದ ಬಳಿಕ ಮೋದಿ ಅವರು 2ನೇ ಬಾರಿ ಆಕಾಶವಾಣಿಯಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ.
ಕಪ್ಪುಹಣ ವಾಪಾಸು ತರುವ ಜವಾಬ್ದಾರಿಯಿಂದ ನಾವು ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದರು.
ಸ್ವಚ್ಚ ಭಾರತ ಆಭಿಯಾನಕ್ಕೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿದ ದೇಶದ ಜನತೆಯನ್ನು ನಾನು ಅಭಿನಂದಿಸುತ್ತೇನೆ . ಸ್ವತ್ಛತೆಯಿಂದ ಖಾಯಿಲೆಗಳು ಕಡಿಮೆ ಮಾಡಬಹುದಾಗಿದೆ ಎಂದು ಮೋದಿ ಹೇಳಿದರು.
ದೇಶ ಇದೀಗ ಬದಲಾವಣೆಯತ್ತ ಸಾಗುತ್ತಿದ್ದು ವಿಶ್ವದ ಶಕ್ತಿಯಾಗಿ ಹೊರ ಹೊಮ್ಮುವ ವಿಶ್ವಾಸ ವ್ಯಕ್ತ ಪಡಿಸಿದರು.

