ಚೆನ್ನೈ: ವಿದ್ಯಾರ್ಥಿಯ ಕೆನ್ನೆ ಚಿವುಟಿ ಬುದ್ದಿ ಹೇಳಿದ ಶಿಕ್ಷಕಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ 50,000 ರೂ. ದಂಡ ವಿಧಿಸಿದ ಘಟನೆ ಚೆನ್ನೈಯ ಕೇಸರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆದಿದೆ. ಇಲ್ಲಿನ  ಶಿಕ್ಷಕಿ ಮಹೆರುನ್ನೀಸಾ 2012ರಲ್ಲಿ ವಿದ್ಯಾರ್ಥಿಯ ಕೆನ್ನೆ ಚಿವುಟಿ ಬುದ್ಧಿ ಹೇಳಿದ್ದರು. ಈ ಬಗ್ಗೆ ಹುಡುಗನ ತಾಯಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು. ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಶಾಲೆಗೆ ಆಯೋಗ 2013 ಮೇನಲ್ಲಿ 1000 ರೂ. ದಂಡ ವಿಧಿಸಿತ್ತು.

eds006

ಘಟನೆ ನಂತರ ಹುಡುಗನ ತಾಯಿ ಶಾಲೆಯಿಂದ ವರ್ಗಾವಣೆ ಪತ್ರ ಕೋರಿದ್ದರು. ಆದರೆ, ವರ್ಗಾವಣೆ ಪತ್ರ ನೀಡಲು ಶಾಲೆಯ ಆಡಳಿತ ಮಂಡಳಿ ಸಾಕಷ್ಟು ಸತಾಯಿಸಿತ್ತು. ಆಯೋಗ ವಿಧಿಸಿದ್ದ ದಂಡದ ಮೊತ್ತ ಹಾಗೂ ವರ್ಗಾವಣೆ ಪತ್ರ ನೀಡಲು ತಡ ಮಾಡಿದ ಬಗ್ಗೆ ಅಸಮಾಧಾನಗೊಂಡಿದ್ದ ತಾಯಿ ಈ ವಿಷಯವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಜತೆಗೆ, ಸೈದಾಪೇಟ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಇದೇ ವಿಷಯವಾಗಿ ಶಿಕ್ಷಕಿ ಸಹ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಅವರ ವಿರುದ್ಧ ಪ್ರಕರಣ ಬಾಕಿ ಇರುವುದಿಂದ ಅಲ್ಲೇ ಅರ್ಜಿ ಸಲ್ಲಿಸುವಂತೆ ಅದು ನಿರ್ದೇಶಿಸಿತ್ತು. ತಪ್ಪು ಎಸಗಿರುವ ಶಿಕ್ಷಕಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ 50,000 ರೂ. ದಂಡ ವಿಧಿಸಿದೆ.

By suddi9

Leave a Reply

Your email address will not be published. Required fields are marked *