ಸುದ್ದಿ9ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿ 59ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಸಂಚಾಲಕ ಜೇ.ಬಿ.ಸಿಕ್ವೇರಾ ಕನ್ನಡ ದ್ವಜಾರೋಹಣ ಮಾಡಿ ಕನ್ನಡ ನಾಡು ನುಡಿಯ ಮಹತ್ವದ ಕುರಿತು ತಿಳಿಸಿದರು. ಮುಖ್ಯ ಶಿಕ್ಷಕ ಮಹೇಶ್ ಶೆಟ್ಟಿ, ಸ್ವರ್ಣಲತಾ, ಐರಿನ್ ಸಾಂತು ಮಯೂರ್, ಉಪಸ್ಥಿತರಿದ್ದರು. ವಿದ್ಯಾಥರ್ಿಗಳಿಂದ ಭಾಷಣ ಮತ್ತು ಸಾಮೂಹಿಕ ಗೀತೆಗಳ ಗಾಯನ ನಡೆಯಿತು. ಶಿಕ್ಷಕಿ ನಿವೇದಿತಾ ಸ್ವಾಗತಿಸಿ, ಶಿಕ್ಷಕಿ ಸುಪ್ರೀತ ವಂದಿಸಿದರು. ಶಿಕ್ಷಕಿ ಸುಕನ್ಯಾ ಕಾರ್ಯಕ್ರಮ ನಿರೂಪಿಸಿದರು.
kanada-rajyotsava-2

By suddi9

Leave a Reply

Your email address will not be published. Required fields are marked *