ಬಂಟ್ವಾಳ: ಶಿಲಾಮಯವಾಗಿ ಪುನರ್ ನವೀಕರಣಗೊಳ್ಳುತ್ತಿರುವ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ನೂತನ ಏಕಶಿಲಾ ಮಾನಸ್ತಂಭೊಪರಿ ಚತುರ್ಮುಖ ೧೦೦೮ ಶ್ರೀ ಆದಿನಾಥ ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ ಫೆ. ೩ರಿಂದ ಫೆ. ೭ರವರೆಗೆ ೫ ದಿನಗಳ ಕಾಲ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಚಪ್ಪರ ಮೂಹೂರ್ತ ಹಾಗೂ ನೂತನ ಕಚೇರಿ ಉದ್ಘಾಟನೆ ಶುಕ್ರವಾರ ನಡೆಯಿತು.
ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಯಾಗಮಂಟಪ, ಸಭಾ ಮಂಟಪ ಹಾಗೂ ಅನ್ನಛತ್ರಕ್ಕೆ ಚಪ್ಪರ ಮುಹೂರ್ತ ನೆರವೇರಿಸಲಾಯಿತು. ಬಳಿಕ ನೂತನ ಕಚೇರಿಯನ್ನು ಡಾ. ಸುದೀಪ್ ಕುಮಾರ್ ಸಿದ್ದಕಟ್ಟೆ ಉದ್ಘಾಟಿಸಿದರು.
ಈ ಸಂದರ್ಭ ಜೀರ್ಣೊದ್ಧಾರ ಮತ್ತು ಪಂಚಕಲ್ಯಾಣ ಮಹೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು, ಪ್ರಧಾನ ಕಾರ್ಯದರ್ಶಿ ದೇವ ಕುಮಾರ್, ಮಹಾವೀರ ಜೈನ್ ಅರಕಲ ಗೂಡು, ಉಪಾಧ್ಯಕ್ಷರುಗಳಾದ ಹರ್ಷೆಂದ್ರ ಹೆಗ್ಡೆ ಅಂತರಗುತ್ತು, ಪ್ರಕಾಶ್ ಕುಮಾರ್ ಪೀರ್ದಬೆಟ್ಟುಗುತ್ತು, ಅಶೋಕ್ ಕುಮಾರ್ ಜೈನ್ ಪಂಜಿಕಲ್ಲು, ರಾಜೇಶ್ ಜೈನ್ ಪಡ್ರಾಯಿಗುತ್ತು, ಕೋಶಾಧಿಕಾರಿ ರತ್ನವರ್ಮ ಇಂದ್ರ ಪಂಜಿಕಲ್ಲು, ಸಹಕೋಶಾಧಿಕಾರಿ ಸಚಿನ್ ಕುಮಾರ್ ಪಡ್ರಾಯಿಗುತ್ತು, ಕೃಷ್ಣರಾಜ್ ಜೈನ್ ಪಂಜಿಕಲ್ಲು ಗುತ್ತು, ಕಾರ್ಯದರ್ಶಿಗಳಾದ ಶ್ರೀಮಂಧರ್ ಜೈನ್ ಪಂಜಿಕಲ್ಲು, ಗೀತಾ ಜಿನಚಂದ್ರ ಬಂಟ್ವಾಳ, ಸಹಕಾರ್ಯದರ್ಶಿಗಳಾದ ಭರತ್ ಜೈನ್ ಬುಡೋಳಿ, ಜೀತೇಂದ್ರ ಜೈನ್ ಬುಡೋಳಿ, ಪದ್ಮಸ್ಮಿತ್ ಅಧಿಕಾರಿ ಹಿರ್ಣಿ, ಸುರೇಶ್ ಶೆಟ್ಟಿ ಕೊಯಿಲಾ, ವಿದ್ಯಾಕುಮಾರ್ ಪಂಜಿಕಲ್ಲು, ಗೌರವ ಸಲಹೆಗಾರರಾದ ಲಲಿತಾ ವಸಂತ ಕುಮಾರ್ ಪಡ್ರಾಯಿಗುತ್ತು, ಸ್ಮರಣ ಸಂಚಿಕೆ ಸಮಿತಿಯ ಚಂದ್ರಶೇಖರ್ ಪಂಜಿಕಲ್ಲು, ನವಿತಾ ಜೈನ್ ಪಂಜಿಕಲ್ಲು ಮೊದಲಾದವರು ಉಪಸ್ಥಿತರಿದ್ದರು.
