ಕಲ್ಲಡ್ಕ : ಸಾಂಪ್ರದಾಯಿಕ ಆಹಾರ ಪದ್ಧತಿ ಎಂಬ ಕಾರ್ಯಕ್ರಮದ ಅಡಿಯಲ್ಲಿ ಕಲ್ಲಡ್ಕ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ವಿದ್ಯಾರ್ಥಿಗಳಿಂದ ಬಾಳೆ ಎಲೆ ಊಟದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.WhatsApp Image 2022-01-08 at 14.30.00“ಬಾಳೆಎಲೆ ದೈವಿಕ ಅಂಶ ಉಳ್ಳದ್ದು. ಬಿಸಿಯಾದ ಪದಾರ್ಥ ಎಲೆಯ ಮೇಲೆ ಬಿದ್ದಾಗ ಅದರಿಂದ ಉತ್ಪತ್ತಿಯಾಗುವ ಪಾಲಿಫಿನೋಲ್ ಅಂಶವು ನಮ್ಮ ದೇಹದ ಒಳಗೆ ಸೇರಿದಾಗ ನಮ್ಮಲ್ಲಿರುವ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ “ ಎಂದು  ಪ್ರಾಥಮಿಕ ಶಾಲೆಯ ಇಂಗ್ಲೀಷ್ ಅಧ್ಯಾಪಕರಾದ ರಾಜೇಶ್ವರಿ  ಬಾಳೆ ಎಲೆ ಊಟದ ಮಹತ್ವವನ್ನು  ತಿಳಿಸಿದರು.WhatsApp Image 2022-01-08 at 14.31.03ನಂತರ ಎರಡನೇ ತರಗತಿ ವಿದ್ಯಾರ್ಥಿಗಳಿಂದ  ಇಂಗ್ಲೀಷ್ ಹಾಡು, ಕನ್ನಡ ಹಾಡು ಹಾಗೂ ನೃತ್ಯ ಪ್ರದರ್ಶನ ನಡೆಯಿತು. ತದನಂತರ ಮಕ್ಕಳಿಗೆ ಸಾಂಪ್ರದಾಯಿಕ ಶೈಲಿಯಲ್ಲಿ  ಬಾಳೆ ಎಲೆಯಲ್ಲಿ ಊಟ ನೀಡಲಾಯಿತು. ಜೊತೆಗೆ ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಪ್ರಾಥಮಿಕ ವಿಭಾಗದ ಎಲ್ಲಾ ಅಧ್ಯಾಪಕರು  ಭಾಗವಹಿಸಿದರು.WhatsApp Image 2022-01-08 at 14.30.14ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯ ಪಿ.ಕೆ.  ಪದ್ಮನಾಭ, ಅಧ್ಯಾಪಕರಾದ ಸುಮಂತ್ ಆಳ್ವ ಹಾಗೂ  ಅನ್ನಪೂರ್ಣ ಎನ್. ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎರಡನೇ ತರಗತಿಯ ವಿದ್ಯಾರ್ಥಿಗಳಾದ  ಸಾನ್ವಿ ನಿರೂಪಿಸಿ,  ಸಮೃದ್ಧಿ ಸ್ವಾಗತಿಸಿ, ಶ್ರೀರಾಮ ವಂದಿಸಿದರು.

By suddi9

Leave a Reply

Your email address will not be published. Required fields are marked *