ಕಲ್ಲಡ್ಕ: ಗೋಪಾಲ್ ಶ್ರೀಮಾನ್ ಇಂದಿನ ಕಾರ್ಯಕ್ರಮದ ಮಹತ್ವವನ್ನು ತಿಳಿಸುತ್ತಾ ವೈಜ್ಞಾನಿಕ ಹಿನ್ನೆಲೆ ಮತ್ತು ಧಾರ್ಮಿಕ ಆಚರಣೆಗಳಿಗೆ ಪ್ರಕೃತಿಯಂತೆ ನಮ್ಮ ಬಾಳಬೆಳಕು ರೂಪಿತವಾಗಬೇಕೆಂದರು ಸೂರ್ಯನು ಕರ್ಕಾಟಕ ರಾಶಿ ಇಂದ ಮಕರ ರಾಶಿಗೆ ಪ್ರವೇಶ ಮಾಡುವುದೇ ಸಂಕ್ರಾಂತಿ ಸಕಲ ಚರಾಚರ ಜೀವಿಗಳಿಗೆ ಶಕ್ತಿ ಚೈತನ್ಯ ಸೂರ್ಯದೇವನೇ ಆಗಿದ್ದಾನೆ.
ಶಬರಿಮಲೆ ಅಯ್ಯಪ್ಪ ಮಕರಜ್ಯೋತಿ ದರ್ಶನ ಪೂಜೆ ಉಪನಯನ ಎಂಬ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಹಿಂದುಗಳು ಸ್ವರ್ಗದ ಬಾಗಿಲು ತೆರೆದ ಪುಣ್ಯಕಾಲ ಎಂದು ನಂಬಿದ್ದು ಆದಿಶಂಕರಾಚಾರ್ಯರ ಜ್ಞಾನದೀಕ್ಷೆಗೆ ಪ್ರಾಶಸ್ತ ಉತ್ತರಾಯಣಕಾಲವೆನ್ನುತ್ತಾ ಎಳ್ಳು ಬೆಲ್ಲವು ದೇಹವನ್ನು ಪ್ರಕೃತಿಗೆ ತಕ್ಕಂತೆ ಸದೃಢಗೊಳಿಸಿ ಕೊಳ್ಳುತ್ತದೆ ಆದ್ದರಿಂದ ಕೆಟ್ಟತನ ದೂರವಾಗಬೇಕು ನಮ್ಮ ಯೋಚನೆಗಳು ಉತ್ತಮಗೊಳಿಸಿ ಕೊಳ್ಳಬೇಕೆಂದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು ಕಾರ್ಯಕ್ರಮದ ವೇದಿಕೆಯಲ್ಲಿ ನಮ್ಮ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶಾಂಭವಿ ಮಾತಾಜಿ ಉಪಸ್ಥಿತರಿದ್ದರು ಕಾರ್ಯಕ್ರಮ ಸಂಯೋಜನೆಯನ್ನು ದೀಕ್ಷಿತಾ ಮಾತಾಜಿ ನಿರ್ವಹಿಸಿ ವಿದ್ಯಾರ್ಥಿ ಭೂಷಣ್ ಸ್ವಾಗತಿಸಿ ಹಾಗೂ ಆಕಾಶ್ ವಂದಿಸಿದರು ಎಲ್ಲಾ ವಿದ್ಯಾರ್ಥಿಗಳು ಎಳ್ಳು-ಬೆಲ್ಲ ಸವಿದು ಖುಷಿಪಟ್ಟರು.
