ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಒಂದನೇ ತರಗತಿಯ ಪರಿಸರ ಅಧ್ಯಯನದ ವಿಷಯಕ್ಕೆ ಸಂಬಂಧಿಸಿದಂತೆ ಸವಿರುಚಿ ಪ್ರಾತ್ಯಕ್ಷಿಕಾ ಕಾರ್ಯಕ್ರಮ ಆಯೋಜಿಸಲಾಯಿತು.WhatsApp Image 2022-01-04 at 1.42.08 AM

ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯೆ ಡಾ|ಕಮಲಾ ಪ್ರಭಾಕರ್ ಭಟ್ ಮಕ್ಕಳಿಗೆ ಕಥೆಯನ್ನು ಹೇಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.WhatsApp Image 2022-01-04 at 1.42.09 AM

ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿಧ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್‌ ಕಲ್ಲಡ್ಕ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಪ್ರಾಥಮಿಕ ಶಾಲಾ ಶೈಕ್ಷಣಿಕ ಪರೀವೀಕ್ಷಕರಾದ ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದು, ತಾವೇ ಮಕ್ಕಳಿಗೆ ತಿಂಡಿಯನ್ನು ಬಡಿಸಿ, ಅವರ ಜೊತೆಕೂತು ತಾವು ತಿಂಡಿಯನ್ನು ಸವಿದರು.WhatsApp Image 2022-01-04 at 11.49.17 PM

ಒಟ್ಟು ೧೫೪ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪೂರ್ವಗುರುಕುಲ ಪ್ರಮುಖರಾದ ರೂಪಕಲಾ ಎನ್ ಉಪಸ್ಥಿತರಿದ್ದರು. ಅತಿಥಿಗಳನ್ನು ಒಂದನೇ ತರಗತಿಯ ಪುಟಾಣಿಗಳು ಸ್ವಾಗತಿಸಿದರು. ಒಂದನೇತರಗತಿಯ ಮಾತಾಜಿಯವರು ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *