ಮುಂಬಯಿ: ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ಮಹಾರಾಷ್ಟ್ರ ಇದರ ಪದಾಧಿಕಾರಿಗಳು ಹೊಟೇಲು ಉದ್ಯಮದ ಸಮಸ್ಯೆಗಳನ್ನು ಅರಿತುಕೊಳ್ಳಲು ಹಾಗೂ ಸೂಕ್ತ ಪರಿಹಾರ ಒದಗಿಸಿ ಕೊಡುವರೇ  ಮಹಾರಾಷ್ಟ್ರದದ್ಯಾಂತ ವಿವಿಧ ಹೊಟೇಲು ಸಂಘಟನೆಗಳ ಸಂದರ್ಶನ ಮಾಡುವರೇ ಫೆಡರೇಶನ್‌ನ ಉಪಾಧ್ಯಕ್ಷ ಡಾ| ಶಂಕರ್ ಬಿ.ಶೆಟ್ಟಿ ವಿರಾರ್ ನೇತೃತ್ವದಲ್ಲಿ ಇಂದು ಸರಣಿ ಭೇಟಿ ಆರಂಭಿಸಿತು.Hotel Fedaration Meeting (04.01.22) C

ಆ ನಿಮಿತ್ತ ಇಂದಿಲ್ಲಿ ಮಂಗಳವಾರ (ಜ.೦೪) ಬೆಳಿಗ್ಗೆ ಬೋರಿವಿಲಿಯಿಂದ ಪ್ರಯಾಣ ಆರಂಭಿಸಿದ್ದು ಮೊದಲಾಗಿ ಸಂಜೆ ವೇಳೆಗೆ ಪುಣೆ ನಗರಕ್ಕೆ ಭೇಟಿ ನೀಡಿ ಅಲ್ಲಿನ ಹೋಟೆಲ್ಸ್ ಅಸೋಸಿಯೇಶನ್‌ಸ್, ಹೊಟೇಲು ಉದ್ಯಮಿಗಳು ಮತ್ತು ಕರ್ಮಚಾರಿಗಳ ಭೇಟಿ ನೀಡಲಿದ್ದೇವೆ. ಬುಧವಾರ ಔರಂಗಾಬಾದ್, ಬಳಿಕ ಪರ್ಭಾನಿ, ನಾಂದೇಡ್, ಲಾತೂರ್, ಅಹ್ಮದ್‌ನಗರ ಮತ್ತು ಅನೇಕ ಹೋಟೆಲ್ ಅಸೋಸಿಯೇಶನ್‌ಸ್ ಮತ್ತು ಪದಾಧಿಕಾರಿಗಳು, ಸದಸ್ಯರನ್ನು ಭೇಟಿಯಾಗುವ ಉದ್ದೇಶವನ್ನಿರಿಸಿದ್ದೇವೆ ಎಂದು ಫೆಡರೇಶನ್‌ನ ಅಪಾಧ್ಯಕ್ಷ ಡಾ| ಶಂಕರ್ ಬಿ.ಶೆಟ್ಟಿ ವಿರಾರ್ ಪತ್ರಕರ್ತರನ್ನುದ್ದೇಶಿಸಿ ತಿಳಿಸಿದರು.Hotel Fedaration Meeting (04.01.22) A

ಫೆಡರೇಶನ್‌ನ ಉಪಾಧ್ಯಕ್ಷ ಶ್ಯಾಮ್ ಎನ್.ಶೆಟ್ಟಿ, ಸುರೇಂದ್ರ ಪಿ.ರೈ ಪುತ್ತೂರು, ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಸಿ.ಸಾಲಿಯಾನ್, ಜಂಟಿ ಕಾರ್ಯದರ್ಶಿ ಬಾಬು ಎನ್.ಶೆಟ್ಟಿ ಪೆರಾರ ಇವರು ರಾಜ್ಯವ್ಯಾಪಿ ಭೇಟಿಯ ತಂಡದಲ್ಲಿ ಪಾಲ್ಗೊಂಡಿರುವರು.

By Suddi9

Leave a Reply

Your email address will not be published. Required fields are marked *