ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಷಷ್ಟಿ ಮಹೋತ್ಸವದ ಪ್ರಯುಕ್ತ ಡಿ.೯ರಂದು ದೇವರ ಬಲಿ ಉತ್ಸವ ನಡೆದು ದೇವರು ಬೆಳ್ಳಿರಥ ಹಾಗೂ ಷಷ್ಟಿ ರಥದಲ್ಲಿ ಆಗಿ ರಥೋತ್ಸವ ನಡೆಯಿತು.
ನಂತರ ವಸಂತ ಮಂಟಪದಲ್ಲಿ ಪಲ್ಲಪೂಜೆ ನೆರವೇರಿದ ಬಳಿಕ (ಗೋಗ್ರಾಸ) ನೈವೇಧ್ಯವನ್ನು ಗೋವುಗಳಿಗೆ ಉಣಬಡಿಸಿ ಭಕ್ತಾದಿಗಳು ದೇವಳದ ಪ್ರಾಂಗಣದಲ್ಲಿ ಮೂರು ಸುತ್ತು ಉರುಳು ಸೇವೆ ನಡೆಸಿದರು.


