ಬಜ್ಪೆ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಇಂಡಿಕಾ ಕಾರ್ ಒಂದಕ್ಕೆ ಬೆಂಕಿ ತಗುಲಿ ಸುಟ್ಟು ಭಸ್ಮವಾದ ಘಟನೆ ಬಜ್ಪೆ ವಿಮಾನ ನಿಲ್ದಾಣದ ಪಾಕರ್ಿಂಗ್ ರಸ್ತೆಯಲ್ಲಿ ನಡೆದಿದೆ. ಆದರೆ ವಿಮಾನ ನಿಲ್ದಾಣದ ಸಿಬ್ಬಂದಿ ತನ್ನ ಸಕಾಲಿಕ ಕಾಯರ್ಾಚರಣೆಯಿಂದ ಬೆಂಕಿ ನಂದಿಸಿ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಕಾರ್ ಮಾಲಿಕ ವೆಂಚಸರ್್ ಎಂಬವರು ತನ್ನ ಕೆಎ 03 ಎಂಇ 6237 ಎಂಬ ಹೆಸರಿನ ಇಂಡಿಕಾ ಕಾರನ್ನು ವಿಮಾನ ನಿಲ್ದಾಣದ ಪಾಕರ್ಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಕಾರ್ ಚಾಲಕ ರಾಜಾ ಶೇಕ್ ಎಂಬವರಿಗೆ ಕಾರ್ ಮಾಲಕ ವೆಂಚಸರ್್ ಎಂಬವರ ಮಗಳನ್ನು ವಿಮಾನನ ನಿಲ್ದಾಣದಿಂದ ಕರೆದುಕೊಂಡು ಬರುವುದು ಉದ್ದೇಶವಾಗಿತ್ತು. ಈ ಸಂದರ್ಭ ರಾಜಾಶೇಕ್ ಕಾರ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಬರುತ್ತಿರುವುದು ಕಾಣಿಸಿದ್ದು ಕ್ಷಣಾರ್ಧದಲ್ಲಿ ಕಾರ್ ಬೆಂಕಿಗೆ ಆಹುತಿಯಾಗಿದೆ. ಆದರೆ ನಿಲ್ದಾಣದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಕಾರ್ಗೆ ಬೆಂಕಿ ತಗುಲಿರುವ ಬಗ್ಗೆ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಶಾಟರ್್ಸಕ್ಯರ್ೂಟ್ ಅಥವಾ ಇಂಜಿನ್ ಬಿಸಿ ಏರಿ ಪೆಟ್ರೋಲ್ ಮುಖಾಂತರ ಕಾರ್ ಬೆಂಕಿಗಾಹುತಿಯಾಗಿರಬಹುದೆಂದು ಸಂಶಯಿಸಲಾಗಿದೆ. ವಿಮಾನ ನಿಲ್ದಾಣದ ನಿದರ್ೇಶಕರಾದ ಜಿ.ಟಿ ರಾಧಾಕೃಷ್ಣ ಅವರು ಬಜ್ಪೆ ಠಾಣೆಗೆ ಮಾಹಿತಿ ನೀಡಿದ್ದಾರೆ. ಬೆಂಕಿ ತಗುಲಿರುವ ಕಾರಣಗಳ ಬಗ್ಗೆ ತನಿಖೆಗೊಳಪಡಿಸಲಾಗವುದೆಂದು ಬಜ್ಪೆ ಪೊಲೀಸರು ತಿಳಿಸಿದ್ದಾರೆ.
