ಅಮ್ಮುಂಜೆ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯತ್ ನಲ್ಲಿ ಗ್ರಾಮಕಾರ್‌ನಿಕ ಕಚೇರಿ ಉದ್ಘಾಟನೆಗೊಂಡಿತು.ಅಮ್ಮುಂಜೆ ಗ್ರಾ.ಪಂ.ಅಧ್ಯಕ್ಷ ವಾಮನ ಆಚಾರ್ಯ ಕಚೇರಿ ಉದ್ಘಾಟಿಸಿದರು.0002

ಗ್ರಾಮದಲ್ಲಿ ಹಲವು ವರ್ಷಗಳಿಂದ ಗ್ರಾಮ ಕಾರ್‌ನಿಕ ಕಚೇರಿ ಇಲ್ಲದೇ ಗ್ರಾಮದ ಜನರು ಪರದಾಡುವಂತಾಗಿದ್ದು ಇತ್ತೀಚೇಗೆ ತಹಶೀಲ್ದಾರ್ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಅವರ ಗಮನೆಕ್ಕೆ ತಂದ ಕೂಡಲೇ ಗ್ರಾಮ ಕಚೇರಿ ತೆರೆಯಲು ಸೂಚಿಸಿದ್ದಾರೆ.7vp va

 ಉಪಾಧ್ಯಕ್ಷೆ ಪ್ರಮೀಳಾ, ತಾಲೂಕು ಪಂ. ಮಾಜಿ ಸದಸ್ಯ ಯಶವಂತ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಸುವರ್ಣ,ರಾಧಕೃಷ್ಣ ತಂತ್ರಿ,ಕಾರ್ತಿಕ್ ಬಳ್ಳಾಲ್,ರೊನಾಲ್ಡ್ ಡಿ.ಸೋಜ, ಭಾಗಿರಥಿ, ಲಕ್ಷ್ಮೀ , ಕರಿಯಂಗಳ ಗ್ರಾ. ಪಂ. ಸದಸ್ಯ ಲೋಕೇಶ್ ಭರಣಿ, ಹಾಲು ಉತ್ಪಾದಕರ ಸ.ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಅಮ್ಮುಂಜೆ, ಪೊಳಲಿ ವ್ಯ.ಸೇ.ಸ. ಸಂಘದ ನಿರ್ದೇಶಕ ಬಿಎ ಅಬುಬಕ್ಕರ್, ಗ್ರಾಮ ಕಾರ್ನಿಕ ಪ್ರಶಾಂತ್, ಪಿಡಿಒ ನಯನ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *