ಹಾಸನ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಬೇಕು. ಇದಕ್ಕಾಗಿ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಸದ್ಯವೇ ಮಾತುಕತೆ ನಡೆಸಲಿದ್ದೇನೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಈ ಮಾತನ್ನು ತಿಳಿಸಿದರು.

ಹುಲಿಯನ್ನು ಭಾರತದ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿದ್ದರಿಂದ ದೇಶದಲ್ಲಿ ಸಂಘರ್ಷದ ವಾತಾವರಣವಿದೆ. ಅದಕ್ಕಾಗಿ ಸಾತ್ವಿಕ ಪ್ರಾಣಿಯಾಗಿರುವ ಕಾಮಧೇನುವನ್ನು ಭಾರತದ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು. ಈ ಬಗ್ಗೆ ಸದ್ಯವೇ ನರೇಂದ್ರ ಮೋದಿಯವರಲ್ಲಿ ಮಾತಾಡಲಿದ್ದೇನೆ ಎಂದವರು ತಿಳಿಸಿದರು.
ಹಸುವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿದರೆ ಭಾರತದಲ್ಲಿ ಸಹಜವಾಗಿಯೇ ಗೋಹತ್ಯಾ ಪ್ರತಿಬಂಧಕ ಕಾನೂನು ಜಾರಿಗೆ ಬರುತ್ತದೆ
