ಮುಂಬಯಿ : ರಾಷ್ಟ್ರ ಕಟ್ಟುವಲ್ಲಿ ಶಿಕ್ಷಕರ ಪಾತ್ರ ತುಂಬಾ ದೊಡ್ದದು. ಶಿಕ್ಷಕರು ತ್ರಿ-ಹೆಚ್ (೩ಊ) ರೀತಿಯಿಂದ ದುಡಿಯಬೇಕಾಗುತ್ತದೆ.ಅವುಗಳೆಂದರೆ ಹೆಡ್-ಹಾರ್ಟ್-ಹ್ಯಾಂಡ್ಸ್. ಈ ಮೂರು ಹೆಚ್ಗಳಿಂದ ದುಡಿದ ಶಿಕ್ಷಕ ದೇಶಕ್ಕೆ ಒಳ್ಳೆಯ ನಾಗರಿಕರನ್ನು ಕೊಡಬಲ್ಲನು. ಪ್ರಭಾಕರ ಶೆಟ್ಟಿ ಅವರು ಇಂತಹದ್ದೇ ಒಳ್ಳೆಯ ಸದ್ಗುಣ ಸಂಪನ್ನ ವ್ಯಕ್ತಿತ್ವವುಳ್ಳವರಾಗಿದ್ದರು. ಅವರೊಬ್ಬ ಉತ್ತಮ ಶಿಕ್ಷಕರಾಗಿದ್ದರು. ನಾವು ಯಾವುದೇ ವೃತ್ತಿ ಮಾಡಿದರೂ ಅದರಲ್ಲಿ ಶ್ರದ್ಧೆ ಇರಬೇಕು ಆ ಮೂಲಕ ಕಾಯಕದಲ್ಲಿ ಕೈಲಾಸ ಕಾಣಬೇಕು. ಇದನ್ನೇ ಪ್ರಭಾಕರ ಶೆಟ್ಟಿ ಅವರು ರೂಡಿಸಿ ಶ್ರದ್ಧಾಳುತ್ವದಿಂದ ದಕ್ಷ ಶಿಕ್ಷಕರೆಣಿಸಿ ಅಪಾರ ಅಭಿಮಾನದ ವಿದ್ಯಾರ್ಥಿಗಳ ಪಾಲಿನ ಮೇಸ್ಟುç ಅಂದೆಣಿಸಿದರು ಎಂದು ಎಸ್.ಎಂ ಶೆಟ್ಟಿ ಕಾಲೇಜು ಪೊವಾಯಿ ಇದರ ಪ್ರಾಂಶುಪಾಲ ಡಾ| ಶ್ರೀಧರ್ ಎಸ್.ಶೆಟ್ಟಿ ತಿಳಿಸಿದರು.
ಗಾಯತ್ರಿ ಪರಿವಾರ ದಹಿಸರ್ ಮುಂಬಯಿ ಸಂಸ್ಥೆಯು ಕಡಂದಲೆ ಪರಾರಿ ದಿವಂಗತ ಪ್ರಭಾಕರ ಎಲ್.ಶೆಟ್ಟಿ (ಭಿವಂಡಿ) ಅವರ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಪ್ರಕಾಶಿಸಲ್ಪಟ್ಟ, ಕುಮಾರಿ ಮಂಜುನಾಥ್ ಶೆಟ್ಟಿ ರಚಿತ `ಋಷಿ ಚಿಂತನೆಯ ಸಾನಿಧ್ಯದಲ್ಲಿ ಭಾಗ-೨’ ಪುಸ್ತಕ ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಯಾನ್ನ ಮುಖ್ಯ ಅಧ್ಯಾಪಕ ಭವನದ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಬಿಡುಗಡೆ ಗೊಳಿಸಿ ಶ್ರೀಧರ್ ಶೆಟ್ಟಿ ಮಾತನಾಡಿದರು.
ಕನ್ನಡ ಸಂಘ ಥಾಣೆ ಇದರ ಮಾಜಿ ಅಧ್ಯಕ್ಷ ಉಮೇಶ್ ಶೆಟ್ಟಿ ಪೊಲ್ಯ ಇವರ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಕಾರ್ಯಕ್ರಮದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಮೊಗವೀರ ಪತ್ರಿಕೆಯ ಸಂಪಾದಕ ಅಶೋಕ ಎಸ್. ಸುವರ್ಣ, ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಉದ್ಯಮಿ ಭಗವಾನ್ ಆಳ್ವ ಅತಿಥಿ ಅಭ್ಯಾಗತರಾಗಿ ವೇದಿಕೆಯಲ್ಲಿ ಅಸೀನರಾಗಿದ್ದರು.
ಸುಮಿತ್ರಾ ಪ್ರಭಾಕರ ಶೆಟ್ಟಿ, ಕಡಂದಲೆ ಪರಾರಿ ಶೇಖರ್ ಎಲ್.ಶೆಟ್ಟಿ, ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಕಿರಣ್ ಪ್ರಭಾಕರ್ ಶೆಟ್ಟಿ, ಸಚಿನ್ ಪ್ರಭಾಕರ್ ಶೆಟ್ಟಿ, ಕೀರ್ತಿ ಸನತ್ ಶೆಟ್ಟಿ, ಭಾಗೀರಥಿ ಕೆ.ಹೆಗ್ಡೆ, ಬಾಲಚಂದ್ರ ಹೆಗ್ಡೆ, ಚಂದ್ರಕಾಂತ್ ಹೆಗ್ಡೆ, ಕು| ನಿಧಿ ಎಸ್.ಶೆಟ್ಟಿ, ಸುಖಲತಾ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು, ಸಾಹಿತ್ಯಾಭಿಮಾ ನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಬಂಟರವಾಣಿ ಸಂಪಾದಕ ಅಶೋಕ್ ಪಕ್ಕಳ ಪುಸ್ತಕದ ಪರಿಚಯಿಸಿದರು.
ಪ್ರಭಾಕರ ಶೆಟ್ಟಿ ಓರ್ವ ಶಿಕ್ಷಕರಾಗಿದ್ದು ಋಷಿ ಬದುಕನ್ನೇ ರೂಪಿಸಿ ಕೊಂಡವರು. ಆದ್ದರಿಂದ ಈ ಕಾರ್ಯಕ್ರಮ ಅವರಿಗೆ ಗೌರವಾರ್ಥವಾಗಿ ಆಯೋಜಿಸಿದಂತಿದೆ. ಅವರು ಎಲ್ಲರ ಪಾಲಿನ ಮೇಸ್ಟುç ಆಗಿದ್ದು ಅವರ ಮೇರು ವ್ಯಕ್ತಿತ್ವ ಎಲ್ಲರಿಗೂ ಮಾದರಿ ಆಗಲಿ ಎಂದು ಪಾಲೆತ್ತಾಡಿ ತಿಳಿಸಿದರು.
ಉಮೇಶ ಶೆಟ್ಟಿ ಮಾತನಾಡಿ ಪ್ರಭಾಕರ ಶೆಟ್ಟಿ ಅವರು ಓರ್ವ ಆದರ್ಶ ಶಿಕ್ಷಕರಾಗಿದ್ದರು. ಇಂದು ಆಧ್ಯಾತ್ಮಿಕ ಗ್ರಂಥವೊಂದು ಲೋಕಾರ್ಪಣೆಗೊಂಡಿದೆ. ಆಧ್ಯಾತ್ಮಿಕ ಗ್ರಂಥಗಳು ಸಮಾಜಕ್ಕೆ ಚಿಂತನೆಗಳನ್ನು ಮೂಡಿಸುತ್ತಿವೆ. ಬದುಕು ಕಟ್ಟಿ ಕೊಳ್ಳುವರ ಜತೆಗೆ ಜೀವನ ಪಾಲನ ಮಾಡೊಕೊಳ್ಳಲು ಈ ಗ್ರಂಥಗಳು ದಾರಿದೀಪವಾಗಿದೆ. ಜಗತ್ತಿನಲ್ಲಿ ಭಾರತದ ಸಂಸ್ಕೃತಿಗೆ ವಿಶೇಷವಾದ ಸ್ಥಾನವಿದೆ. ಧಾರ್ಮಿಕ ಪ್ರಜ್ಞೆ ಬೆಳೆದರೆ ಬೌಧಿಕ ಪ್ರಜ್ಞೆ ಬೆಳೆಯುತ್ತದೆ ಎಂದರು.
ಸಮಾಜವನ್ನು ಸುಸಂಸ್ಕೃತವಾಗಿ ಮಾಡುವುದೇ ಗಾಯತ್ರಿ ಪರಿವಾರದ ಉದ್ದೇಶವಾಗಿದೆ. ತಮ್ಮ ತತ್ವಾನುಸಾರ ಪ್ರತೀಯೊಂದು ವ್ಯಕ್ತಿಯನ್ನು ಸಂಸ್ಕಾರಯುತರನ್ನಾಗಿಸಿ ಸ್ವಸ್ಥಸಮಾಜದ ನಿರ್ಮಾಣ ಇವರದ್ದಾಗಿದೆ. ಸತ್ಸಂಗದೊಂದಿಗೆ ಇದೊಂದು ಸಮಾಜ ಪರಿವರ್ತನೆಯ ಶಕ್ತಿಯಗಿದೆ ಎಂದು ಅಶೋಕ ಸುವರ್ಣ ತಿಳಿಸಿದರು.
ಬಂಟ ಕುಲದ, ಭಾರೀ ಪ್ರಸಿದ್ಧಿ ಪಡೆದ ರಾಜ ಮನೆತನದಲ್ಲಿನ ಕಡಂದಲೆ ಪರಾರಿ ರಾಜ ಮನೆತನದ ಸ್ವರ್ಗೀಯ ಪ್ರಭಾಕರ ಶೆಟ್ಟಿ ಅವರ ನೆನಪು ಚಿರಾಯು ಆಗಿರಬೇಕೆಂದೇ ಋಷಿ ಚಿಂತನೆ ಎಂದು ಹೆಸರಿಸಲಾಗಿದೆ. ನಮ್ಮ ವಿಚಾರಗಳಲ್ಲಿ ಅದ್ಭುತ ಶಕ್ತಿಯಿದೆ. ವೇದ ಉಪನಿಶಷತ್ತುಗಳು ಸಮಾಜವನ್ನು ಜಾಗೃತಿಗೊಳಿಸುತ್ತವೆ. ಅನ್ನದಲ್ಲಿ ಸಕ್ಕರೆವಿದ್ದರೆ ರುಚಿ. ಮೆಣಸಿನ ಕಾಯಿವಿದ್ದರೆ ಖಾರ. ಹಾಗಾಗಿ ನಮ್ಮ ಒಳ್ಳೆಯ ಚಿಂತನೆ ನಮ್ಮ ಮನಸ್ಸಿಗೆ ಒಳೆಯದನ್ನೇ ಬೋಧಿಸುತ್ತದೆ ಎಂದು ಉಮಾ ಶೆಟ್ಟಿ ತಿಳಿಸಿದರು.
ಜಯಲಕ್ಷಿ ್ಮ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಅತಿಥಿಗಳು ಕೃತಿಕರ್ತೆ ಕುಮಾರಿ ಮಂಜುನಾಥ್ ಶೆಟ್ಟಿ ಅವರಿಗೆ ಸನ್ಮಾನಿಸಿ ಗೌರವಿಸಿದರು. ಪೇಟೆಮನೆ ಪ್ರಕಾಶ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅವಿನವ ಶೆಟ್ಟಿ ವಂದನಾರ್ಪಣೆಗೈದರು.
