ಮುಂಬಯಿ: ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಅಮೆರಿಕ ಪ್ರವಾಸದ ವೇಳೆ ರಾಷ್ಟ್ರಧ್ಯಕ್ಷ ಜೋ ಬೈಡನ್ ಜೊತೆಗಿದ್ದ ಮೂರು ದಿನಗಳಲ್ಲಿ ಅಮೆರಿಕದ ಶ್ವೇತ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂಲದ ಸುಮಲ್ ಕೋಟ್ಯಾನ್ ಪ್ರಧಾನಿಯವರ ಆತಿಥ್ಯದ ಸಂಪೂರ್ಣ ಜವಾಬ್ದಾರಿ ನೋಡಿಕೊಂಡಿದ್ದರು.
ಅಮೆರಿಕದಲ್ಲಿ ಮೋದಿಯವರಿಗೆ ಎರಡನೇ ಬಾರಿ ಆತಿಥ್ಯದ ಜವಾಬ್ದಾರಿ ನೋಡಿಕೊಂಡ ಈಕೆ ಮಂಗಳೂರು ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸುನಿಲ್ ಕುಮಾರ್ ಗಂಜಿಮಠ ಅವರ ಕಿರಿ ಸಹೋದರಿಯ ಪುತ್ರಿಯಾಗಿದ್ದಾರೆ. 
