ಮುಂಬಯಿ: ಉಡುಪಿ ಮೂಲತಃ ಕೊಂಕಣಿ-ಕನ್ನಡತಿ ಅಪೂರ್ವ ವಿ.ನಾಯಕ್ ಉಡುಪಿಯಿಂದ ೨೫ ವರ್ಷದ ತರುಣಿ, ಮಿಸ್ ಅರ್ಥ್ ಇಂಡಿಯಾದ ೧೮ ರಾಷ್ಟ್ರೀಯ ಫೈನಲಿಸ್ಟ್ಗಳಲ್ಲಿ ಓರ್ವಳಾಗಿ ಆಯ್ಕೆ ಆಗಿದ್ದಾರೆ. ಡಿವೈನ್ ಬ್ಯೂಟಿ ಗ್ರೂಪ್ (ದೈವಿಕ ಸೌಂದರ್ಯ ಸಮೂಹ) ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾಗಿದ್ದು ಮಿಸ್ ಅರ್ಥ್ ೨೦೨೧ರಲ್ಲಿ ಭಾರತ ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ಪ್ರಪಂಚದಾದ್ಯಂತದ ಇತರ ಪ್ರತಿನಿಧಿಗಳೊಂದಿಗೆ ಭಾಗವಹಿಸಲಿದ್ದಾರೆ. ಎಂದು ಡಿವೈನ್ ಬ್ಯೂಟಿ ತಿಳಿಸಿದೆ.
ಅಪೂರ್ವ ಮಾತನಾಡುತ್ತಾ, ಆಹಾರ ತ್ಯಾಜ್ಯ ನಿರ್ವಹಣೆಗೆ ಮಾತೃ ಭೂಮಿಗೆ ಮರಳಿ ನೀಡುವುದು ಮತ್ತು ಹಾಗೆ ಮಾಡಲು ಇತರರನ್ನು ಪ್ರೋತ್ಸಾಹಿಸುವುದು ತನ್ನ ಜೀವನದ ಗುರಿಯಾಗಿದೆ ಎಂದು ಹೇಳಿದ್ದಾರೆೆ. ತನ್ನ ಉದ್ದೇಶವೇ ಪ್ರಕೃತಿ ಸೌದರ್ಯದ ಭೂಮಿಯನ್ನು ಉಳಿಸುವುದಲ್ಲದೆ ಪ್ರಪಂಚದ ಹಸಿವನ್ನು ನಿರ್ಮೂಲನೆ ಮಾಡಲು ಸಹಾಯ ಮಾಡುವುದಾಗಿದೆ ಎಂದಿದ್ದಾರೆ.
ಕಳೆದ ಮೂರು ವರ್ಷಗಳಿಂದ ಈ ಕಾರಣಕ್ಕಾಗಿ ತಾನು ಕೆಲಸ ನಿರ್ವಾಹಿಸುತ್ತಿದ್ದೇನೆ ಮತ್ತು ಡಿವೈನ್ ಬ್ಯೂಟಿ ಅಂತಹ ದೊಡ್ಡ ವೇದಿಕೆಯನ್ನು ಹೊಂದಲು ಸಂತೋಷವಾಗಿದೆ. ಇದು ಸಾವಿರಾರು ಜನರಿಗೆ ತನ್ನ ತಿಳಿಹೇಳಲು ಸಹಾಯ ಮಾಡುತ್ತದೆ ಮತ್ತು ಆದ್ದರಿಂದ ಲಕ್ಷಾಂತರ ಜನರಿಗೆ ಸಂದೇಶ ಮುಟ್ಟುತ್ತದೆ.
ಅಪೂರ್ವಾ ಈ ಹಿಂದೆ ವರ್ಷದ ಝೆನ್ ಏಷಿಯಾ ಫೇಸ್, ‘ಪರ್ಫೆಕ್ಟ್ ಮಿಸ್ ಇಂಡಿಯಾ-೨೦೧೫, ಟೈಮ್ಸ್ ಫ್ರೆಶ್ ಫೇಸ್ನ ಫ್ಯಾಂಟಸಿ ಫೇಸ್ ಆಫ್ ದ ಇಯರ್ -೨೦೧೫, ಮೊದಲ ರನ್ನರ್ ಅಪ್ ಮತ್ತು ಕಿರೀಟವನ್ನು ಹೊಂದಿದ್ದರು ಮತ್ತು ಫೆಮಿನಾ ಮಿಸ್ ಇಂಡಿಯಾ ಗೋವಾ ರಾಜ್ಯ ಫೈನಲಿಸ್ಟ್ ಆಗಿದ್ದರು.
ಉಡುಪಿ ಜಿಲ್ಲೆಯ ಕಾರ್ಕಳ ನಕ್ರೆ ಅಲ್ಲಿನ ಆರ್ಎಸ್ಬಿ ಸಮಾಜದ ಹೆಸರಾಂತ ಸಮಾಜ ಸೇವಕ, ಯುವ ಉದ್ಯಮಿ, ಶ್ರೀ ವಿಘ್ನಹರ್ತ ಡೆವೆಲರ್ಸ್ ಸಂಸ್ಥೆಯ ಪ್ರಧಾನ ಪ್ರವರ್ಧನಕ, ಉಡುಪಿ ಅಲ್ಲಿನ `ಆರ್ಎಸ್ಬಿ ವಿಂಡ್ಸರ್’ ಸಮುಚ್ಚಯದ ರೂವಾರಿ ವಸಂತ್ ಆರ್.ನಾಯಕ್ ಮತ್ತು ಗೀತಾ ವಸಂತ್ ನಾಯಕ್ ದಂಪತಿ ಏಕೈಕ ಸುಪುತ್ರಿ ಅಪೂರ್ವ ಮುಂಬಯಿನ ಅಂಧೇರಿ ನಿವಾಸಿ. ಅಂಧೇರಿ ಪೂರ್ವದ ಡಿವೈನ್ಚೈಲ್ಡ್ ಹೈಸ್ಕೂಲು ಮತ್ತು ಸಾಟೆ ಕಾಲೇಜು ವಿದ್ಯಾರ್ಥಿನಿ ಆಗಿದ್ದು, ವಿದ್ಯಾರ್ಥಿ ಜೀವನದಲ್ಲೇ ಪ್ರತಿಭಾನ್ವಿತಳಾಗಿ ನೂರಾರು ಪುರಸ್ಕಾರ ಗೌರವಕ್ಕೆ ಪಾತ್ರರಾಗಿರುವರು.
