ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃ ತ ಆರ್ಥಿಕ ತಜ್ಞ ಡಾ| ಆರ್.ಕೆ ಶೆಟ್ಟಿ ಅವರ ಮಾತೃಶ್ರೀ ಚಿಕ್ಕ ಮಗಳೂರು ಕಂಬಿಹಳ್ಳಿ ಅಪ್ಪಿ ಕೃಷ್ಣ ಶೆಟ್ಟಿ ಅವರು ಇತ್ತೀಚೆಗೆ ಕಾಲವಶರಾಗಿದ್ದು ಮೃತರ ಆತ್ಮಕ್ಕೆ ಶೋಕಸಭೆಯನ್ನು ಕಳೆದ ಆದಿತ್ಯವಾರ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ಆಯೋಜಿಸಲಾಗಿತ್ತು.
ಬಂಟರ ಭವನದ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿನ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ಅರವಿಂದ ಬನ್ನಿತ್ತಾಯ ಪ್ರತಿಷ್ಠಾಪಿಸಲ್ಪಟ್ಟ ದೇವರಿಗೆ ಪೂಜೆ ನೆರವೇರಿಸಿ ಅಗಲಿದ ದಿವ್ಯಾತ್ಮಕ್ಕೆ ಸದ್ಗತಿ ಕರುಣಿಸಲೆಂದು ಪ್ರಾರ್ಥಿಸಿ ಉಪಸ್ಥಿತ ಅಪ್ಪಿ ಶೆಟ್ಟಿ ಪರಿವಾರಕ್ಕೆ ಪ್ರಸಾದ ನೀಡಿ ಹರಸಿದರು. ಈ ಸಂದರ್ಭದಲ್ಲಿ ಮೃತರ ಸುಪುತ್ರರಾದ ಆನಂದ್ ಕುಮಾರ್, ಡಾ| ಆರ್.ಕೆ ಶೆಟ್ಟಿ, ಮೋಹನ್ ಕುಮಾರ್, ಸೊಸೆ ಅನಿತಾ ಆರ್.ಶೆಟ್ಟಿ, ಮೊಮ್ಮಗ ಶ್ರೇಯಸ್ ಆರ್.ಶೆಟ್ಟಿ, ಬಂಟರ ಸಂಘದ ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ಕೃಷ್ಣ ವಿ.ಶೆಟ್ಟಿ ಉಪಸ್ಥಿತರಿದ್ದರು.
ನಂತರ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ನೇರವೇರಿಸಲ್ಪಟ್ಟ ಶ್ರದ್ಧಾಂಜಲಿ ಸಭೆಯಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಉಪಸ್ಥಿತರಿದ್ದು ದೈವಕ್ಯ ಅಪ್ಪಿ ಶೆಟ್ಟಿ ಭಾವಚಿತ್ರಕ್ಕೆ ಪುಷ್ಪಾಂಜಲಿಗೈದು ಕಂಬನಿ ಮಿಡಿದರು. ಹಾಗೂ ಬಂಟರ ಸಂಘದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿ ಈ ಪ್ರಪಂಚದಲ್ಲಿ ಪ್ರತಿಯೊಂದು ಜೀವಿಗೂ ಮರಣ ಇದೆ. ಹುಟ್ಟು ಆಕಸ್ಮಿಕವಾದರೆ ಸಾವು ನಿಶ್ಚಿತ. ನಾವೆಲ್ಲರೂ ಈ ಭೂಮಿಯಲ್ಲಿ ಕೆಲವೇ ದಿನದ ಬಂಧುಗಳು. ಜೀವ ಇದ್ದಾಗ ನಾವು ಮಾಡಿದ ಪ್ರತೀ ಕರ್ಮ ಮತ್ತು ಧರ್ಮಗಳು ಇಹಲೋಕ ತ್ಯಜಿಸಿದರೂ ಸ್ಮರಣೀಯವಾಗಿರುವುದು. ನಮ್ಮ ಪ್ರಮಾಪ್ತ ಬಂಧು ಆರ್.ಕೆ ಶೆಟ್ಟಿ ಅವರ ಅಮ್ಮನ ಅಲಗಿಕೆ ನಮಗೆಲ್ಲಾ ಬೇಸರ ತಂದಿದೆ. ನಮ್ಮನ್ನಗಲಿದ ಆತ್ಮಕ್ಕೆ ಶ್ರೀಹರಿಯು ಚಿರಶಾಂತಿ ಕರುಣಿಸಲಿ ಎಂದು ಪ್ರಾಥಿsðಸುವೆ ಎಂದರು.
ಆರ್.ಕೆ.ಶೆಟ್ಟಿ ಮಾತನಾಡಿ ನಮ್ಮ ಅಮ್ಮನ ಅಗಲುವಿಕೆಯ ದುಃಖಕರ ಸಮಯದಿ ನಮ್ಮ ನೋವಿನಲ್ಲಿ ಬೆಂಬಲವಾಗಿ ನಿಂತು ಪ್ರತ್ಯೇಕ್ಷ ಪರೋಕ್ಷವಾಗಿ ಭಾವನಾತ್ಮಕ ಸಂದೇಶಗಳ ಮೂಲಕ ನಮಗೆ ಸಹಾನುಭೂತಿ ನೀಡಿ ಮನೋಬಲ ತುಂಬಿ ಪ್ರಾರ್ಥನೆ, ನುಡಿನಮನಗಳೊಂದಿಗೆ ಸಂತಾಪ ಸೂಚಿಸಿ ಅಗಲಿದ ಮಾತೃಶ್ರೀ ಶ್ರೀಮತಿ ಅಪ್ಪಿ ಕೆ.ಶೆಟ್ಟಿ ಅವರ ದಿವ್ಯಾತ್ಮಕ್ಕೆ ಚಿರಶಾಂತಿ, ಸದ್ಗತಿ ಕೋರಿದ ಎಲ್ಲರಿಗೂ ಹೃನ್ಮಗಳಿಂದ ಆಭಾರ ಮನ್ನಿಸುತ್ತೇವೆ ಎಂದರು.
ಜಾಗತಿಕ ಬಂಟರ ಒಕ್ಕೂಟದ ಗೌರವ ಕೋಶಾಧಿಕಾರಿ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಜೊತೆ ಕೋಶಾಧಿಕಾರಿ ಮುಂಡಪ್ಪ ಎಸ್.ಪಯ್ಯಡೆ, ಬಂಟರ ಸಂಘದ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಸಂಚಾಲಕ ನ್ಯಾ| ಆರ್.ಜಿ ಶೆಟ್ಟಿ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್ ಹೆಗ್ಡೆ, ಮಾಜಿ ಶಾಸಕ ಮಧುಕರ್ ಚವ್ಹಾಣ್, ಎಲ್‌ಐಸಿ ಪ್ರಬಂಧಕ ಕೆ.ಹರಿಸೂಧನ್, ಎಲ್‌ಐಸಿ ಮಾಜಿ ಅಧಿಕಾರಿ ಮಲ್ಹೋತ್ರಾ, ನಿಲೇಶ್ ಶೆಟ್ಟಿ ಮಾತನಾಡಿ ನುಡಿ ನಮನ ಸಲ್ಲಿಸಿ ಭಾವಪೂರ್ಣ ಬಾಷ್ಪಾಂಜಲಿ ಕೋರಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಬಂಟರ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ್ ಎಲ್.ಶೆಟ್ಟಿ, ಆಹಾರ್‌ನ ಮಾಜಿ ಅಧ್ಯಕ್ಷ ಆದರ್ಶ್ ಶೆಟ್ಟಿ, ಕೃಷ್ಣ ವೈ.ಶೆಟ್ಟಿ, ಡಾ| ಪ್ರಭಾಕರ್ ಶೆಟ್ಟಿ ಬೋಳ, ಸಿಎ| ಐ.ಆರ್ ಶೆಟ್ಟಿ, ಇಂದ್ರಾಳಿ ದಿವಾಕರ್ ಶೆಟ್ಟಿ, ಅಲ್ಲದೆ ಆರ್.ಕೆ.ಶೆಟ್ಟಿ ಬಂಧು ಬಳಗ, ವಿವಿಧ ಸಂಘ ಸಂಸ್ಥೆಗಳ, ಬಂಟರ ಸಂಘ ಹಾಗೂ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಹಿತೈಷಿಗಳು ಉಪಸ್ಥಿತರಿದ್ದು ಸಂತಾಪ ವ್ಯಕ್ತ ಪಡಿಸಿ ಅಗಲಿದ ಚೇತನದ ಭಾವಚಿತ್ರಕ್ಕೆ ಪುಷ್ಫವೃಷ್ಟಿಗೈದು ಶ್ರದ್ಧಾಂಜಲಿ ಅರ್ಪಿಸಿದರು. ಅಶೋಕ್ ಪಕ್ಕಳ ಸಭೆ ನಿರೂಪಿಸಿದ್ದು ಗಣೇಶ್ ಎರ್ಮಾಳ್ ಭಜನಾ ಸಂಕೀರ್ತನೆ ನಡೆಸಿದರು.
