ಬಂಟ್ವಾಳ: ವಿದ್ಯಾನಿಕೇತನ ವಿದ್ಯಾಸಂಸ್ಥೆ ಅಮ್ಟಾಡಿ ಬಂಟಾಳದಲ್ಲಿ ವಿದ್ಯಾರ್ಥಿಗಳಿಗೆ ಭತ್ತದ ಕೃಷಿ ನಾಟಿ ಮಾಡುವ ಬಗ್ಗೆ ಪ್ರಾತ್ಯಕ್ಷಿಕ ತರಬೇತಿಯನ್ನು ಶಾಲಾ ಆವರಣದ ಗದ್ದೆಯಲ್ಲಿ ಮಾಡಿತೋರಿಸಲಾಯಿತು ವಿದ್ಯಾರ್ಥಿಗಳು ನೇಜಿ ನೆಡುವುದರೊಂದಿಗೆ ಕೃಷಿಕ ಜಯಾನಂದ ಪೆರಾಜೆ ಕೃಷಿಯ ಮಾಹಿತಿಯನ್ನು ನೀಡಿದರು.

ಜಿಲ್ಲೆಯಲ್ಲಿ ಭತ್ತದ ಕೃಷಿಯೊಂದಿಗೆ ತುಳುನಾಡಿನ ಸಂಸ್ಕೃತಿಯು ಮಾಯವಾಗುತ್ತಿದೆ. ವಿದ್ಯಾರ್ಥಿಗಳು ಕೃಷಿ ಪದ್ದತಿ ಹಾಗೂ ಸಂಸ್ಕೃತಿಯನ್ನು ಅರಿತುಕೊಳ್ಳಬೇಕೆಂದು ವಿವರಣೆ ನೀಡಿದರು. ವಿಶ್ವನಾಥ ಮತ್ತು ಕೊರಗಪ್ಪಣ್ಣ ಗದ್ದೆ ಹದಗೊಳಿಸಿ ನೇಜಿ ನೆಡುವ ವ್ಯವಸ್ಥೆ ಮಾಡಿದ್ದರು.
ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ” ರಾವೋ ರಾವೋ ಕೊರುಂಗು ,ಓ ಬೇಲೆ ಮೊದಲಾದ ತುಳು ಪಾಡ್ದನ ಹಾಡಿ ಸಂತಸ ಪಟ್ಟರು. ಶಾಲಾ ಟ್ರಸ್ಟಿ ಕಿರಣ್ ಎಸ್ ಬಾಳಿಗ ಮುಖ್ಯೋಪಾದ್ಯಾಯಿನಿ ಸುಜಾತ ಬಿ, ಸಹ ಮುಖ್ಯೋಪಾದ್ಯಾಯಿನಿ ಹೇಮಲತಾ , ಮೊಂಟೆಸೊರಿ ಮುಖ್ಯ ಶಿಕ್ಷಕಿ ಸವಿತಾ ಕಿರಣ್ ಮತ್ತು ಶಿಕ್ಷಕರು ಪಾಲ್ಗೊಂಡರು.
