ಸುದ್ದಿ9ಕೈಕಂಬ: ಇಂದು ಜನರಿಗೆ ಕೃಷಿ ಚಟುವಟಿಕೆಗಳತ್ತ ಆಸಕ್ತಿ ತೀರಾ ಕಡಿಮೆಯಾಗುತ್ತಿದೆ. ಒಂದೆಡೆ ಕೂಲಿಯಾಳುಗಳ ಸಮಸ್ಯೆ, ಮತ್ತೊಂದೆಡೆ ಆಥರ್ೀಕ ಹೊಡೆತ ಇವೆಲ್ಲಾ ಸಮಸ್ಯೆಗಳಿಂದ ರೈತನಿಗೆ ಕೃಷಿಚಟುವಟಿಕೆಯ ಆಸಕ್ತಿ ನಿಧಾನವಾಗಿ ಕಡಿಮೆಗೊಳ್ಳುತ್ತದೆ. ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ , ಕೃಷಿ ಇಲಾಖೆ ಮಂಗಳೂರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕೃಷಿಯಂತ್ರೋಪಕರಣಗಳನ್ನು ಪೂರೈಕೆ ಮಾಡುತ್ತಿದೆ.
ಒಂದು ಪ್ರದೇಶದ ಒಂದು ಹೋಬಳಿಯನ್ನು ಆಯ್ಕೆ ಮಾಡಿಕೊಂಡು ಆ ಪ್ರದೇಶದ ಭತ್ತ ಕೃಷಿ ಮಾಡುವ ರೈತರಿಗೆ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಪೂರೈಕೆ ಮಾಡಲಿದೆ. ಇದರಲ್ಲಿ ರ್ಕವ್ಯ ನಿರ್ವಹಿಸಲು ಧರ್ಮಸ್ಥಳದ ಯೋಜನೆಯ ವತಿಯಿಂದ ಸಿಬ್ಬಂದಿಯನ್ನು ನಿಯೋಜಿಸಿದೆ. ರೈತರು ತಮ್ಮ ಕೃಷಿ ಚಟುವಟಿಕೆಯನ್ನು ಪ್ರಾರಂಭ ಮಾಡುವ ಮುಂಚೆ ಆಯಾಯ ಪ್ರದೇಶದ ಯಂತ್ರಮನೆಯ ಕಚೇರಿಯನ್ನು ತೆರೆಯಲಾಗುತ್ತದೆ. ರೈತರು ತಮ್ಮ ಭತ್ತದ ಕೃಷಿ ಆರಂಭವಾಗುವ ಮುನ್ನ ಇಲ್ಲಿ ಬಂದು ನೋಂದಾಯಿಸಿಕೊಂಡರೆ ಅದರ ಸಿಬ್ಬಂದಿ ಬಂದು ಭತ್ತದ ಕೃಷಿಯನ್ನು ನಡೆಸಿಕೊಡುತ್ತಾನೆ. ರೈತರು ಅದಕ್ಕೆ ತಕ್ಕಂತೆ ಯಂತ್ರೋಪರಣದ ವೆಚ್ಚವನ್ನು ನೀಡಿದರಾಯ್ತು. ಇಲ್ಲಿ ಯಂತ್ರಗಳನ್ನು ನಿಲ್ಲಿಸಲೂ ವ್ಯವಸ್ಥೆಯೂ ಇರುತ್ತದೆ.
ಕೃಷಿ ಇಲಾಖೆಯವರು ಗುರುಪುರ ಹೋಬಳಿ ವ್ಯಾಪ್ತಿಯಲ್ಲಿ ರೈತರಿಗೆ ಉಪಯೋಗವಾಗಲೆಂದು ತೆಂಕೆಡಪದವಿನ ಕೊಂದೋಡಿ ಎಂಬಲ್ಲಿ ಯಂತ್ರದ ಮನೆಯೊಂದನ್ನು ತೆರೆದಿದೆ. ಇಲ್ಲಿ ಯಂತ್ರೋಪಕರಣಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಿದ್ದು, ಸೂಕ್ತ ಸಿಬ್ಬಂದಿಯನ್ನೂ ನಿಯೋಜಿಸಿದ್ದಾರೆ. ಧರ್ಮಸ್ಥಳದ ಗ್ರಾಮೀಣಭಿವೃದ್ಧಿ ಇದರ ಮೇಲುಸ್ತುವಾರಿಯನ್ನು ನೋಡುತ್ತದೆ. ಈ ಹೋಬಳಿಯಲ್ಲಿ ಎಡಪದವು, ಗುರುಪುರ, ಗಂಜಿಮಠ,ಕುಪ್ಪೆಪದವು ಹಾಗೂ ಇನ್ನಿತರ ಪ್ರದೇಶಗಳನ್ನೊಳಗೊಂಡಿದೆ. ಎಡಪದವಿನಲ್ಲಿ ಒಟ್ಟು 12 ಯಂತ್ರಗಳಿದ್ದು ಎಲ್ಲವೂ ಸುಧಾರಿತ ತಂತ್ರಜ್ಞಾನವನ್ನಿಳಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಯಾವೆಲ್ಲಾ ಯಂತ್ರಗಳಿವೆ?
ಕಂಬೈನ್ಡ್ ಹಾವರ್ೆಟರಿ(ಕಟಾವು ಯಂತ್ರ) : ಈ ಯಂತ್ರದಿಂದ ಒಟ್ಟು 6ರಿಂದ 8 ಕೆಜಿಯಷ್ಟು ಬತ್ತವನ್ನು ಕಟಾವು ಮಾಡಬಹುದು.
ವಿಎಸ್ಟಿ ಯಾಂಜಿ ಯಂತ್ರ(ನಾಟಿ ಯಂತ್ರ):
ಇದರಲ್ಲಿ ಗಂಟೆಗೆ 2.5 ಎಕ್ರೆ ಜಮೀನಿನಲ್ಲಿ ನಾಟಿ ಮಾಡಬಹುದು. ಅಲ್ಲದೆ ಇದರಲ್ಲಿ ನಾಟಿ ಮಾಡಲೆಂದು 8 ಸಾಲುಗಳಿರುತ್ತದೆ.
ಟ್ರಷರ್(ಒತ್ತಿ ಒಕ್ಕಣಿ ಯಂತ್ರ): ಇದನ್ನು ಕಟಾವಿಗೆ ಸಿದ್ಧವಾದ ಬತ್ತಗಳನ್ನು ಅಕ್ಕಿ ಮಾಡುವುದು ಈ ಯಂತ್ರವನ್ನು ಉಪಯೋಗಿಸಬಹುದು.
ಅಲ್ಲದೆ ಉಳುಮೆ ಮಾಡಲು ಟ್ರಿಲ್ಲರ್, ಹುಲ್ಲು ಕೀಳುವ ಯಂತ್ರ, ಸ್ಟರಿಂಗ್ ಟೈಪ್ ಕಲ್ಟಿವೇಟರ್, ಪವರ್ ಟ್ರಲ್ಲರ್, ಪವರ್ ಕೋನೋವೀಡರ್, ಸ್ಟ್ರೇಯರ್, ಪವರ್ ವೀಡರ್ ಅಡಿಕೆ ಸುಲಿಯುವ ಯಂತ್ರ ಹೀಗೆ ಹಲವಾರು ಕೃಷಿಕರಿಗೆ ಬೇಕಾಗುವ ಯಂತ್ರೋಪಕರಣಗಳೆಲ್ಲಾ ಲಭ್ಯವಿದೆ.
ಸಹಾಯಕ ಕೃಷಿ ನಿದರ್ೇಶಕಿ ಅನೀಸ್ ಸೆಲ್ವಂ ನೀಡಿದ ಮಾಹಿತಿ ಇಷ್ಟು:
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕೃಷಿಕರಿಗೆ ವ್ಯವಸ್ಥಿತವಾಗಿ ಬೆಳೆ ಬೆಳೆಸುವ ಸಲುವಾಗಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಪೂರೈಸಲು `ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ’ಗಳನ್ನು ತೆರೆಯಲಾಗಿದೆ. ರೈತರಿಗೆ ಸಕಾಲದಲ್ಲಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವ ಯೋಜನೆ ಇದಾಗಿದ್ದು ಈಗಾಗಲೇ ರಾಜ್ಯದ ಗ್ರಾಮೀಣ ಪ್ರದೇಶದ 18ಲ ಹೋಬಳಿಗಳನ್ನು ಆಯ್ಕೆ ಮಾಲಾಗಿದೆ. ಆಯಾಯ ಹೋಬಳಿಗಳಲ್ಲಿ ಟ್ರಸ್ಟ್ ಅಥವಾ ಸಕರ್ಾರೇತರ ಸಂಸ್ಥೆಗಳ ಮೂಲಕ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡ ಹೋಬಳಿಗಳಲ್ಲಿ ತೆರೆಯುವುದು ಇದರ ಕ್ರಮ. ಾಜ್ಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ರೂರಲ್ ಡೆವಲಪ್ಮೆಂಟ್ ಇದರಲ್ಲಿ ಸಹಭಾಗಿತ್ವ ಪಡೆದುಕೊಂಡಿದೆ.
ಈ ಯೋಜನೆಗೆ ಕೇಂದ್ರ 75 ಇಷ್ಟು25(75:25) ಅನುಪಾದಲ್ಲಿ ಸಹಾಯಧನ ನೀಡುತ್ತದೆ. ಅಂದರೆ 75 ಭಾಗವನ್ನು ಸರಕಾರ ಭರಿಸಿದರೆ ಉಳಿದ 25 ಭಾಗವನ್ನು ವಹಿಸಿಕೊಂಡ ಸಂಸ್ಥೆ ಭರಿಸಬೇಕಾಗುತ್ತದೆ. ಇವುಗಳನ್ನು ಕಾರ್ಯಗತಗೊಳಿಸಲು ಆಯ್ಕೆ ಮಾಡಿಕೊಂಡ ಹೋಬಳಿಗಳಲ್ಲಿ ಯಂತ್ರ ಮನೆಯನ್ನು ಸ್ಥಾಪಿಸಿ ಬಾಡಿಗೆ ಆಧಾರಿತ ಸೇವಾಕೇಂದ್ರಗಳನ್ನು ಸ್ಥಾಪಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಪುತ್ತೂರು, ಉಪ್ಪಿನಂಗಡಿ, ಪಾಣೆಮಂಗಳೂರು ಮುಂತಾದ ಕಡೆಗಳಲ್ಲಿ ಈ ರೀತಿಯ ಸೆವಾಕೇಂದ್ರಗಳನ್ನು ತೆರೆಯಲಾಗಿದೆ ಎಂಬ ಮಾಹಿತಿಯನ್ನು ಅನೀಸ್ ಸೆಲ್ವಂ ತಿಳಿಸಿದ್ದಾರೆ.
ರೈತರ ಗದ್ದೆಗಳಿಗೆ ತಕ್ಕಂತೆ ಯಂತ್ರಗಳನ್ನು ಆಯ್ಕೆ ಮಾಡಲಾಗಿದ್ದು, ಆಯಾಯ ಪ್ರದೇಶಕ್ಕೆ ಹೊಂದಿಕೆಯಾಗುವಂತ ಪ್ರದೇಶದಲ್ಲಿ ಸೂಕ್ತವಾದಂತಹಾ ಯಂತ್ರೋಪಕರಣಗಳನ್ನು ಒದಗಿಸಿರುವುದರಿಂದ ಕೃಷಿಚಟುವಟಿಕೆಗೆ ಪೂರಕವಾಗಿರುತ್ತದೆ ಎಂಬುದು ಅನೀಸ್ ಸೆಲ್ವಂ ಅಭಿಪ್ರಾಯ.
ರೈತರು ಮಾಡಬೇಕಾಗಿದ್ದು ಇಷ್ಟೆ:
ತನ್ನ ಹೋಬಳಿಯಲ್ಲಿರುವ ಯಂತ್ರಮನೆಗಳನ್ನು ಸಂಪಕರ್ಿಸಿ ಸೂಕ್ತ ಮೊತ್ತವನ್ನು ಕೊಟ್ಟು ನೋಂದಣಿ ಮಾಡಿಸಿದರೆ ನಿಯೋಜನೆಗೊಂಡ ವ್ಯಕ್ತಿ ತಮ್ಮ ಕೃಷಿ ಪ್ರದೇಶಕ್ಕೆ ಬಂದು ಕೃಷಿಚಟುವಟಿಕೆ ನಡೆಸಿಕೊಂಡು ಹೋಗುತ್ತಾನೆ.
ಸಾಧಕಬಾಧಕಗಳು: ಕೆಲವೊಂದು ಭಾರಿ ಗಾತ್ರದ ಯಂತ್ರಗಳನ್ನು ಸಾಗಿಸಲು ರಸ್ತೆಯ ಅವಶ್ಯಕತೆ ಇರುತ್ತದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ರಸ್ತೆಯ ಸಮಸ್ಯೆ ಕಾಡುವುದರಿಂದ ಕೊಂಚ ಹಿನ್ನೆಡೆ ಸಿಗುವ ಸಾಧ್ಯತೆ ಇದೆ. ಅಲ್ಲದೆ ಇಲ್ಲಿನ ರೈತರು ಸಣ್ಣಹಿಡುವಳಿಧಾರರಾಗಿರುವುದರಿಂದ ಚಿಕ್ಕಚಿಕ್ಕ ಗದ್ದೆಗಳನ್ನು ಹೊಂದಿರುವುದರಿಂದ ಯಂತ್ರ ಅಳವಡಿಸಿದರೆ ರೈತರು ನಷ್ಟ ಅನುಭವಿಸುವ ಸಾಧ್ಯತೆ ಇದೆ.
ರೈತರು ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸರಕಾರ ಇದಕ್ಕೆ ಸೂಕ್ತ ಪ್ರಚಾರ ನೀಡಿ ರೈತರನ್ನು ಪ್ರೋತ್ಸಾಹಿಸಿವುದು ಅವಶ್ಯವಾಗಿರುತ್ತದೆ.
7

1

2

3

4

By Suddi9

Leave a Reply

Your email address will not be published. Required fields are marked *