ಮುಂಬಯಿ : ಕಲಾ ಸೌರಭ ಮುಂಬಯಿ ಸಂಸ್ಥೆಯು ಡಾ| ಸುನೀತಾ ಎಂ.ಶೆಟ್ಟಿ ಅವರ ಸಾಹಿತ್ಯದ ನಾಲ್ಕು ಕನ್ನಡ ಮತ್ತು ನಾಲ್ಕು ತುಳು ಗೀತೆಗಳ ಸಂಗ್ರಹ ಸುನಿತ (ಸುಮಧುರ-ನಿನಾದ-ತರಂಗ) ಅಡಿಯೋಗೆ ಹೊಸ ರೂಪ ಕೊಟ್ಟು ಸಾಹಿತ್ಯಕ್ಕೆ ತಕ್ಕಂತೆ ಕರಾವಳಿಯಾದ್ಯಂತ ಭೇಟಿಗೈದು ಪ್ರಕೃತಿ ಸೌಂದರ್ಯದೊಂದಿಗೆ ಚಿತ್ರೀಕರಣ ಗೊಳಿಸಿದ ವಿಡಿಯೋ ಸಂಗೀತ ಅಲ್ಬಮ್ `ಸೃಷ್ಠಿ ಸಿಂಗಾರ’ ಎಂದು ಮರುನಾಮಕರಣ ದೊಂದಿಗೆ ೨೦೦೯ರಲ್ಲಿ ಲೋಕಾರ್ಪಣೆ ಮಾಡಿರುವೆವು.Kalaa Saurabha 2Dರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ಜನ ಮನ್ನಣೆ ಪಡಿದಿರುವ ಈ ವಿಡಿಯೋ ಸಂಗೀತ ಅಲ್ಬಮ್ ಬಹಳಷ್ಟು ಮಂದಿಯ ಒತ್ತಡ ಬೇಡಿಕೆಯ ಮೇರೆಗೆ ಸಾಮಾಜಿಕ ತಾಣಜಾಲ (ಸೋಷಿಯಲ್ ಮೀಡಿಯಾ), ಯೂಟ್ಯೂಬ್. ಫೇಸ್‌ಬುಕ್ ಹಾಗೂ ಪೆನ್‌ಡ್ರೈ ಮೂಲಕ ಮರು ಬಿಡುಗಡೆ ಮಾಡಿರುವೆವು.

ಅಭಿಮಾನಿಗಳ ಮೆಚ್ಚುಗೆ ಈಗಾಗಲೇ ಬಹಳವಾಗಿ ಹರಿದು ಬಂದಿದೆ. ಮೊದಲ ದಿನದಲ್ಲೇ ೨೦೦೦ ಹೆಚ್ಚು ವೀಕ್ಷಣೆ ನಡೆದಿದೆ. ಸಾಹಿತ್ಯ ಸಂಗೀತ ಲೋಕಕ್ಕೆ ಇದೊಂದು ಗೌರವದ ಅಪೂರ್ವ ಕೊಡುಗೆ ಎಂದು ತಿಳಿಸಲು ಹೆಮ್ಮೆ ಪಡುತ್ತಾ ಸಾಹಿತಿ ಕವಿಗಳು ಸಂಗೀತಾಭಿಮಾನಿ ಕಲಾಪೋಷಕರು ವೀಕ್ಷಿಸಿ ಸಲಹೆ ಸೂಚನೆ ಸಹಕಾರಗಳನ್ನಿತ್ತು ಇಂತಹ ಕೆಲಸ ಕಾರ್ಯಕ್ಕೂ ಪ್ರೋತ್ಸಾಹ ನೀಡಬೇಕೆಂದು ವಿನಂತಿಸುವೆ. ಕಲಾ ಸೌರಭ ಮುಂಬಯಿ ನಿರ್ದೇಶಕ ಪದ್ಮನಾಭ ಸಸಿಹಿತ್ಲು (೯೯೮೭೯೫೯೭೫೦) ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *