ಮುಂಬಯಿ  : ಜೀವನದುದ್ದಕ್ಕೂ ಪತ್ರಿಕೆಯೊಂದಿಗೆ ಅನಿನಾಭಾವ ಸಂಬಂಧ ಹೊಂದಿರುವ ಅಗ್ಗಿತ್ತಾಯರು ಬರಹಗಾರನಾಗಿಯೂ, ಪತ್ರಿಕೆಯ ಓದುಗರಾಗಿಯೂ ಅನುಭವ ಹಾಗೂ ಅರಿವಿನ ಖಜಾನೆಯನ್ನೇ ಹೊಂದಿರುವವರು. ಪತ್ರಿಕಾ ಮಿತ್ರರಾಗಿರುಗ ಇವರು ಒಳ್ಳೆಯ ಓದುಗ ಹಾಗೂ ಪತ್ರಿಕೆಗಳಿಗೆ ಸಕಾಲದಲ್ಲಿ ವರದಿಗಳನ್ನು ತಲುಪಿಸುವ ಕಾರ್ಯವನ್ನೂ ಮಾಡುತ್ತಿದ್ದರು. ಆದುದರಿಂದ ಅವರನ್ನು ಸನ್ನಾನಿಸಿ ಗೌರವಿಸುವ ಮೂಲಕ ಪತ್ರಿಕಾ ದಿನಾಚರಣೆ ಸಂಪನ್ನವಾಯಿತು ಎಂದು ಪತ್ರಕರ್ತ ವೀಜಿ ಕಾಸರಗೋಡು ಅಭಿಪ್ರಾಯಪಟ್ಟರು.Kasaragodu Press Journalist Day

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಜರಗಿದ ಪತ್ರಿಕಾ ದಿನಾಚರಣಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಿಕಾ ಮಿತ್ರ, ಸಮಾಜ ಸೇವಕ ಬಾಲಕೃಷ್ಣ ಅಗ್ಗಿತ್ತಾಯ ಮಧೂರು ಅವರಿಗೆ ಗೌರವಾರ್ಪಣೆ ಸಲ್ಲಿಸಿ ವೀಜಿ ಮಾತನಾಡಿದರು. ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಉಪಾಧ್ಯಕ್ಷರಾದ ಪ್ರೊ| ಶ್ರೀನಾಥ್ ಕಾಸರಗೋಡು ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ಗಡಿನಾಡ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎ ಆರ್ ಸುಬ್ಬಯ್ಯಕಟ್ಟೆ ಶುಭಾಶಂಸನೆ ಗೈದರು.

ಈ ಸಂದರ್ಭ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾರ್ಯದರ್ಶಿ,ಪತ್ರಕರ್ತ ಅಖಿಲೇಶ್ ನಗುಮುಗಂ ಮಲಯಾಳ ಸಿನಿಮಾ ನಿರ್ದೇಶಕ ಕೃಷ್ಣಕುಮಾರ್ ಬದಿಯಡ್ಕ, ಬಾಲಕೃಷ್ಣ ಅಗ್ಗಿತ್ತಾಯ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *