ಮೂಡುಬಿದರೆ: ರಸ್ತೆ ದಾಟುತ್ತಿದ್ದ ವೃದ್ದೆಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ವೃದ್ಧೆ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಘಟನೆ ಬೆಳುವಾಯಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತ ವೃದ್ಧೆಯನ್ನು ಬೆಳುವಾಯಿಯ ದಿವಂಗತ ಚಂದಯ್ಯ ಪೂಜಾರಿ ಅವರ ಪತ್ನಿ ಜಲಜ ಪೂಜಾತರ್ಿ(65)ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ ಬೆಳುವಾಯಿ ಅಳಿಯೂರು ರಸ್ತೆಯಲ್ಲಿ ಬೈಕ್ ಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆ ದಿಡೀರ್ ರಸ್ತೆಗೆ ಅಡ್ಡ ಬಂದಾಗ ಬೈಕ್ಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದುದರಿಂದ ತಲೆಗೆ ಏಟು ಬಿತ್ತೆನ್ನಲಾಗಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರೂ ದಾರಿ ಮದ್ಯೆ ಮೃತಪಟ್ಟರೆನ್ನಲಾಗಿದೆ. ಬೈಕ್ ಸವಾರ ಮೂಡುಮಾನರ್ಾಡಿನ
ರಮೇಶ್ ಆಚಾರ್ಯ ವಿರುದ್ಧ ಮೂಡುಬಿದರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
