ಮೂಡುಬಿದರೆ: ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2014 ರಲ್ಲಿ ಮೊದಲ ಬಾರಿಗೆ ಪ್ರಾದೇಶಿಕ ಭಾಷೆಗಳಾದ ತುಳು-ಕೊಂಕಣಿ-ಬ್ಯಾರಿ ಭಾಷೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಸಮಾನಾಂತರ ವೇದಿಕೆಯಲ್ಲಿ ಮೂರು ದಿನಗಳ ಕಾಲ ಈ ನುಡಿವೈಭವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಆಳ್ವಾಸ್ ನುಡಿಸಿರಿ ನಡೆಯುವ ಮೂರೂ ದಿನಗಳು ಸಂಜೆ 5.30.ರಿಂದ 7.ರವರೆಗೆ ಆಯಾ ಭಾಷಾ ಉಪನ್ಯಾಸಗಳನ್ನೊಳಗೊಂಡ ಸಭಾ ಕಾರ್ಯಕ್ರಮವಿವೆ. ಸಂಜೆ 7.ರಿಂದ ತಡರಾತ್ರಿವರೆಗೆ ಆಯಾ ಭಾಷೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನವೆಂಬರ್ 14 ರಂದು ತುಳು, 15 ರಂದು ಕೊಂಕಣಿ ಹಾಗೂ 16 ರಂದು ಬ್ಯಾರಿ ನುಡಿವೈಭವಗಳು ಮೂಡುಬಿದರೆಯ ವಿದ್ಯಾಗಿರಿಯಲ್ಲಿ ನಡೆಯಲಿವೆ. ಕನರ್ಾಟಕ ವರ್ತಮಾನದ ತಲ್ಲಣಗಳು ಎಂಬ ಆಳ್ವಾಸ್ ನುಡಿಸಿರಿಯ ಮುಖ್ಯ ಪರಿಕಲ್ಪನೆಗೆ ಅನುಗುಣವಾಗಿ ಈ ಸಂಯೋಜನೆಯನ್ನು ಮಾಡಲಾಗಿದೆ. ಭಾಷಾ ಸಾಮರಸ್ಯ ಇಂದಿನ ಬಹುಮುಖ್ಯ ಅಗತ್ಯವಾಗಿರುವುದರಿಂದ ಪ್ರಾದೇಶಿಕ ಭಾಷೆಯ ಜನರು ಒಂದು ಕಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುವ ಅವಕಾಶ ಇದಾಗಿದೆ. ಆ ಮೂಲಕ ಪ್ರಧಾನ ಭಾಷೆಯಾದ ಕನ್ನಡದ ಜೊತೆಗೆ ಅನುಸಂಧಾನ ನಡೆಸಿದಂತಾಗುತ್ತದೆ. ಜೊತೆಗೆ ಆಯಾ ಭಾಷಾ ಸಂಸ್ಕೃತಿಯನ್ನು ಇತರ ಭಾಷಾ ಬಾಂಧವರಿಗೆ ಪರಿಚಯಿಸಿ ಪರಸ್ಪರ ಗೌರವವನ್ನು ಬೆಳೆಸಿಕೊಳ್ಳುವ ಮನೋಭಾವವೂ ಇದರಲ್ಲಿ ಮೂಡಿಬರಬೇಕೆಂದು ಸಮ್ಮೇಳನದ ರೂವಾರಿ ಡಾ.ಎಂ.ಮೋಹನ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮ್ಮ ತಮ್ಮ ಭಾಷೆ – ಸಂಸ್ಕೃತಿಗಳಲ್ಲಿ ಗೌರವನ್ನಿಟ್ಟುಕೊಂಡು ಆತ್ಮಭಾಷಾ ಸಂಸ್ಕೃತಿಗಳನ್ನು ಗೌರವಿಸುವ ಮನೋಭಾವ ನಮ್ಮದಾಗಬೇಕು. ಆ ಮೂಲಕ ಪ್ರದೇಶ-ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಸಾಮರಸ್ಯ ಮೂಡಬೇಕು. ಈ ಸಣ್ಣ ಪ್ರಯತ್ನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುವ ಮೂಲಕ ತುಳು-ಕೊಂಕಣಿ-ಬ್ಯಾರಿ ಭಾಷಾ ನುಡಿವೈಭಗಳನ್ನು ಯಶಸ್ಸುಗೊಳಿಸಬೇಕೆಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪಕಿಸಬೇಕಾದ ವಿಳಾಸ: ಡಾ.ಎಂ.ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದರೆ.
ದೂರವಾಣಿ: 08258-261229.
