ಮೂಡುಬಿದಿರೆ: ದ.ಕ ಜಿಲ್ಲಾ ಕೇಂದ್ರ ಮಂಗಳೂರು ಬಿಟ್ಟರೆ ಅತೀ ವೇಗದಲ್ಲಿ ಬೆಳವಣಿಗೆ ಹೊಂದುತ್ತಿರುವ ಮೂಡುಬಿದಿರೆ ಇತಿಹಾಸದ ಪುಟಗಳಲ್ಲಿ ಜೈನಕಾಶಿಯಾಗಿ, ಇದೀಗ ಸಾಹಿತ್ಯ ಕಾಶಿಯಾಗಿ, ಜ್ಞಾನಕಾಶಿಯಾಗಿ ಮಾತ್ರವಲ್ಲ ಸಸ್ಯ ಕಾಶಿಯಾಗಿಯೂ ಜಗದಗಲ ಚಿರಪರಿಚಿತ. ಹೀಗೆ ಮೂರ್ತಿ    ಚಿಕ್ಕದಾದರೂ ಕೀರ್ತಿ    ದೊಡ್ಡದು ಎನ್ನುವ ಹಿರಿಮೆಯ ಮೂಡುಬಿದಿರೆ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ,ಹೀಗೆ ನಾಡು ನುಡಿಯ ಸೇವೆಯಲ್ಲಿ ತನ್ನ ಮಹೋನ್ನತ ಸಾಧನೆಗಳಿಂದ ಎಲ್ಲರಿಗಿಂತ ಮುಂದಿದ್ದರೂ ಊರಿಗೊಂದು ಏಕರೂಪದ ಹೆಸರೇ ಇಲ್ಲ ಎನ್ನುವುದು ಮಾತ್ರ ಮೂಡುಬಿದಿರೆಯ ಅಭಿಮಾನಿಗಳಿಗೆ ಬೇಸರದ ಸಂಗತಿ.
ಮೂಡುಬಿದಿರೆ ತನ್ನಲ್ಲಿರುವ 18 ಕೆರೆಗಳು, 18 ಬಸದಿಗಳು, 18 ದೇವಾಲಯಗಳು ಮಾತ್ರವಲ್ಲ ಒಂದೇ ಕಡೆ 18 ಕಾಲೇಜುಗಳ ಸಮೂಹದಲ್ಲಿ 18 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿರುವ ವಿಶೇಷತೆಯ ಪೇಟೆ. ವಿಶೇಷತೆಯೆಂದರೆ ಮೂಡುಬಿದಿರೆ ಎಂಬ ಈ ಊರಿನ ಹೆಸರನ್ನೂ ಮೂಡುಬಿದ್ರ್ರಿ,
nama phalaka
ಮೂಡಬಿದ್ರೆ,ಮೂಡುಬಿದ್ರೆ,ಮೂಡುಬಿದರೆ,ಮೂಡ್ಬಿದ್ರೆ,ಮೂಡ್ಬಿದಿರೆ, ಮೂಡ್ಬಿದ್ರಿ … ಹೀಗೆ ಸುಮಾರು 18 ಕ್ಕೂ ಹೆಚ್ಚು ರೀತಿಯಲ್ಲಿ ಸಾರ್ವಜನಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರೆ ನಂಬಲೇ ಬೇಕು. ಅದು ಸರ್ಕಾ ರಿ, ಖಾಸಗಿ ಯಾವುದೇ ಪತ್ರ, ಆದೇಶಗಳಿರಲಿ, ಆಮಂತ್ರಣ ಪತ್ರವಿರಲಿ.. ಅಲ್ಲಿ ಊರಿನ ಹೆಸರು ಹಲವೆಡೆ ಕೆಲವು ರೂಪದಲ್ಲಿರುತ್ತದೆ. ಆದರೂ ಯಾರೂ ಆ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ.
ಪೇಟೆಯ ಅಂಗಡಿ ಬೋರ್ಡ್ ಗಳಲ್ಲೊಂದು, ಒಳಗೆ ಲೆಟರ್ ಹೆಡ್, ಬಿಲ್ಗಳಲ್ಲಿ ಇನ್ನೊಂದು, ಆಮಂತ್ರಣ ಪತ್ರಿಕೆಗಳಲ್ಲಿ ಮತ್ತೊಂದು, ಕರಪತ್ರಗಳಲ್ಲಿ ಮಗದೊಂದು, ಖಾಸಗಿ ಬಸ್ಸುಗಳಲ್ಲಿ, ಸರಕಾರಿ ಕರ್ಚಿನ   ಬೋರ್ಡ್ ಗಳಲ್ಲಿ ಹೀಗೆ ಮೂಡುಬಿದಿರೆ ಇಲ್ಲಿ ವಿರೂಪವಾಗುತ್ತಲೇ ಇದೆ. ದಿನಪತ್ರಿಕೆಗಳೂ ಮೂಡುಬಿದಿರೆಯ ಬಗ್ಗೆ ತಮ್ಮದೇ ತೀರ್ಮಾನಕ್ಕೆ ಬಂದು ತಮ್ಮದೇ ನಿರ್ದಾ ರದಂತೆ ಒಂದೊಂದು ರೀತಿ ಮೂಡುಬಿದಿರೆಯನ್ನು ತಮ್ಮ ವರದಿಯ ಡೇಟ್ ಲೈನ್ಗಳಲ್ಲಿ ಬಳಸಿಕೊಳ್ಳುತ್ತಲೇ ಇವೆ. ಪುರಸಭೆಯ ಕಛೇರಿಯ ಮುಂದೆ ಇರುವ ಶಿಲಾಫಲಕವೂ ಇಂತಹ ಗೊಂದಲಗಳಿಂದ ಹೊರತಾಗಿಲ್ಲ ಎಂದರೆ ಪರಿಸ್ಥಿತಿ ಎಂತಹ ವಿಷಮಕ್ಕೆ ಮುಟ್ಟಿದೆ ಎನ್ನುವುದನ್ನು ಊಹಿಸಿಕೊಳ್ಳಿ!ಉಸಿರಿನಂತೆ ಹೆಸರೂ ಮುಖ್ಯ ಎನ್ನುವುದನ್ನು ಒಪ್ಪುವುದಾದರೆ .. ಮೂಡುಬಿದಿಎಂಬ ಊರಿನ ಹೆಸರು ಏಕರೂಪದಲ್ಲಿರದೇ ಅವರವರ ಭಾವಕ್ಕೆ ತಕ್ಕಂತೆ ಇಲ್ಲಿ ಬದಲಾಗಿದೆ. ಬದಲಾಗುತ್ತಲೇ ಇದೆ.
ಮೂಡುಬಿದಿರೆಗೊಂದು ಏಕರೂಪದ ಹೆಸರಿಗಾಗಿ ಸಾರ್ವಜನಿಕ ಹಿತಾಸಕ್ತಿಯ ಹೋರಾಟವೇ ನಡೆದಿಲ್ಲ ಎಂದರೆ ತಪ್ಪಾಗುತ್ತದೆ. 2012ರ ಜನವರಿ 18ರಂದು ಇಂತಹದ್ದೊಂದು ಮನವಿ ಪುರಸಭೆಯ ಮುಂದೆ ಬಂದಾಗ ಅದು ಮುಂದಿನ ಮೇ7ರಂದು ಅಂದಿನ ಪುರಸಭಾಧ್ಯಕ್ಷರಾಗಿದ್ದ ರತ್ನಾಕರ ದೇವಾಡಿಗ ಅಧ್ಯಕ್ಷತೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ   ಬಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕರಕ್ಕೆ ಪ್ರಸ್ತಾವನೆ ಸಲ್ಲಿಸುವ ನಿರ್ಣಯವಾಗಿತ್ತು. ಸರ್ಕಾರಿ    ಕಛೇರಿಯ ಕಡತ, ಪತ್ರವ್ಯವಹಾರದಲ್ಲಿ , ಪುರಸಭಾ ವೆಬ್ಸೈಟ್ನಲ್ಲಿ ಮೂಡುಬಿದಿರೆ ಎಂದು ನಮೂದಿಸುವುದಾಗಿಯೂ ತಿರ್ಮಾನ ವಾಗಿತ್ತು.ಆಗ ಮುಖ್ಯಾಧಿಕಾರಿಯಾಗಿದ್ದ ರಾಯಪ್ಪನವರ ಮುತುವರ್ಜಿ ಯಲ್ಲಿ ಪುರಸಭೆಯ ವ್ಯವಹಾರಗಳಲ್ಲಿ ‘ಮೂಡುಬಿದಿರೆ’ ಎನ್ನುವ ಬಳಕೆ ಆರಂಭವಾಗಿದ್ದೊಂದು ಸಕರಾತ್ಮಕ ಬೆಳವಣಿಗೆ.
ಆದರೇನಂತೆ…2012ರ ಜುಲೈ 28ರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ‘ಮೂಡುಬಿದಿರೆ’ ಹೆಸರನ್ನು ಅಂತಿಮವಾಗಿಸಿ ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿದ್ದು ಈ ಬಗ್ಗೆ ದ.ಕ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ನಿರ್ಣಯ (40) ಕೈಗೊಳ್ಳಲಾಯಿತು. ಮುಂದೆ ಈ ಬಗ್ಗೆ ಅನುಮತಿ ಕೋರಿ ಈ ಪತ್ರ ಜಿಲ್ಲಾದಿಕಾರಿಗಳಿಗೆ ಹೊರಟಿದ್ದು 2013ರ ಮೇ 12ರಂದು! ಅದೂ ಬರೋಬ್ಬರಿ ಸರಿ ಸುಮಾರು ಹತ್ತು ತಿಂಗಳ ಬಳಿಕ! ನಂತರ ಏನಾಗಿದೆ ಎನ್ನುವ ಮಾಹಿತಿ ಇಲ್ಲ. ಆ ಕಡತ ಎಲ್ಲಿದೆಯೋ ದೇವರೇ ಬಲ್ಲ. ಜಿಲ್ಲಾಧಿಕಾರಿಗಳ ಕಛೇರಿಗೆ ಆ ಪತ್ರ ತಲುಪಿದೆಯೋ, ತಲುಪಿದ್ದರೆ ಉತ್ತರವಾದರೂ ಯಾವಾಗ ಬರುತ್ತದೆ ಎನ್ನುವುದು ಇನ್ನೂ ಗೊತ್ತಿಲ್ಲ!
ಮೂಡುಬಿದಿರೆ ಹೆಸರುಗಳು
ಮೂಡುಬಿದಿರೆ ಎನ್ನುವ ಪೇಟೆಯ ಹೆಸರು ಮೂಡುಬಿದಿರೆಯಲ್ಲಿ 18ಕ್ಕೂ ಹೆಚ್ಚು ರೀತಿ ಬಳಕೆಯಲ್ಲಿದೆ. ಮೂಡುಬಿದಿರೆ, ಮೂಡುಬಿದರೆ, ಮೂಡು ಬಿದ್ರೆ, ಮೂಡು ಬಿದ್ರಿ, ಮೂಡ ಬಿದರೆ, ಮೂಡ ಬಿದಿರೆ, ಮೂಡಬಿದ್ರೆ, ಮೂಡಬಿದ್ರಿ, ಮೂಡ್ಬಿದಿರೆ, ಮೂಡ್ಬಿದರೆ, ಮೂಡ್ಬಿದ್ರೆ, ಮೂಡ್ಬಿದ್ರಿ, ಮೂಢಬಿದ್ರೆ, ಮೂಡಬಿದುರೆ, ಮೂಡುಬಿದುರೆ, ಮೂಡ್ಬಿದುರೆ, ಮೂಢಬಿದ್ರೆ, ಮೂಢಬಿದ್ರಿ…ಹುಡುಕಿದರೆ ಇನ್ನೂ ಇರಬಹುದೇನೋ

By suddi9

Leave a Reply

Your email address will not be published. Required fields are marked *