ಕೈಕಂಬ : ಒಡಿಯೂರು ಶ್ರೀ ಗುರುದೇವಾ ಸೇವಾ ಬಳಗ ಮತ್ತು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ (ಮಹಾರಾಷ್ಟ್ರ ಘಟಕ)ಒಡಿಯೂರು ಶ್ರೀಗಳವರ ಷಷ್ಥ್ಯಬ್ಧಿ ಸಂಭ್ರಮ ಆಚರಣೆಯ ನಿಮಿತ್ತ ನಡೆದ ಸಭೆಯಲ್ಲಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಬಿ. ವಿವೇಕ್ ಶೆಟ್ಟಿ ಇವರನ್ನು ಒಡಿಯೂರು ಶ್ರೀಗಳವರ ಷಷ್ಥ್ಯಬ್ಧಿ ಸಂಭ್ರಮ ದ ಮುಂಬಯಿ ಪ್ರಾದೇಶಿಕ ಸಮಿತಿಯ ಗೌರವ ಅಧ್ಯಕ್ಷರಾಗಿ, ಉದ್ಯಮಿ ವಾಮಯ್ಯ ಬಿ. ಶೆಟ್ಟಿಯವರನ್ನು ಅಧ್ಯಕ್ಷರನ್ನಾಗಿ, ಪ್ರಕಾಶ್ ಶೆಟ್ಟಿ ಪೇಟೆಮನೆ ಇವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರವೀಂದ್ರ ಶೆಟ್ಟಿಯವರನ್ನು ಕೋಶಾಧಿಕಾರಿಯಾಗಿ ನೇಮಕ ಮಾಡಲಾಯಿತು.2

ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕೃತಿಕ ಚೈತನ್ಯದ ಕುಸಿತಕ್ಕೆ ಒಳಗಾಗುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ ಎಂಬ ಮನದಿಚ್ಚೆಯನ್ನು ಹೊಂದಿರುವ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ ಧರ್ಮ, ಸಂಸ್ಕೃತಿ ಆಚರಣೆಯನ್ನೊಳಗೊಂಡ ಸಲಹಾ ಮತ್ತು ಸಾಂಸ್ಕೃತಿಕ ಸಮಿತಿಯನ್ನು ರಚಿಸಿ, ಶ್ರೀಗಳವರ ಷಷ್ಥ್ಯಬ್ಧಿ ಸಂಭ್ರಮವನ್ನು ಸಾಂಸ್ಕೃತಿಕ ಚೈತನ್ಯದ ಸಮಾರಂಭದಲ್ಲಿ ಆಚರಿಸುವುದೆಂದು ನಿರ್ಧರಿಸಲಾಯಿತು.

– ಈಶ್ವರ ಎಂ. ಐಲ್

By Suddi9

Leave a Reply

Your email address will not be published. Required fields are marked *