ಮುಂಬೈ: ಮಹಾರಾಷ್ಟದಲ್ಲಿ ಬಿಜೆಪಿ ಜತೆ ಸೇರಿ ಸಮ್ಮಿಶ್ರ ಸಕರ್ಾರ ರಚಿಸಲು ಶಿವಸೇನೆ ಒಪ್ಪಿಕೊಂಡಿದೆ. ಈ ಮೂಲಕ ಚುನಾವಣಾ ಪೂರ್ವದಲ್ಲಿ ಮುರಿದು ಬಿದ್ದ ಮೈತ್ರಿ ಮತ್ತೊಮ್ಮೆ ಒಟ್ಟಾಗುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಉಭಯ ಪಕ್ಷಗಳ ರಾಜ್ಯ ನಾಯಕರು ಸೋಮವಾರ ಬೆಳಗ್ಗೆ ಸಭೆ ನಡೆಸಿ ಈ ಬಗ್ಗೆ ಚಚರ್ಿಸಿದ್ದಾರೆ. ಪ್ರಸ್ತುತ ಸಭೆಯಲ್ಲಿ ಶಿವಸೇನೆ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದೆ ಎಂದು ಹೇಳಲಾಗುತ್ತಿದೆ.
1
ಈ ವಿಚಾರವಾಗಿ ಹಂತ ಹಂತವಾಗಿ ಮಾತುಕತೆ ನಡೆದು ಬರುತ್ತಿದ್ದು, ಇನ್ನು ಕೆಲವೇ ಗಂಟೆಗಳಲ್ಲಿ ಅಧಿಕೃತ ಘೋಷಣೆ ಹೊರಡಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ. ಇದೀಗ ಶಿವಸೇನೆಯ ಮುಖ್ಯಸ್ಥ ಉದ್ದವ್ ಠಾಕ್ರೆ ಸೇನಾ ಭವನದಲ್ಲಿ ಶಿವಸೇನಾ ಶಾಸಕರೊಂದಿಗೆ ಸಭೆ ನಡೆಸುತ್ತಿದ್ದಾರೆ. ಈ ಸಭೆ ಮುಗಿದ ನಂತರ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಲಾಗುವುದು.
ಅದೇ ವೇಳೆ ಈ ಸಭೆಯಲ್ಲಿಯೇ ಶಿವಸೇನೆ ತಮ್ಮ ಶಾಸಕರ ನಾಯಕನನ್ನೂ ಆಯ್ಕೆ ಮಾಡಲಿದೆ.
ಬಿಜೆಪಿಯಲ್ಲಿ ಸಕರ್ಾರ ರಚಿಸುವುದಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ರಾಜ್ನಾಥ್ ಸಿಂಗ್ ಮತ್ತು ಹಿರಿಯ ನಾಯಕ ಜೆ .ಪಿ ನದ್ದಾ ಇಂದು ಮುಂಬೈಗೆ ಭೇಟಿ ನೀಡಬೇಕಾಗಿತ್ತು. ಆದರೆ ಈ ಭೇಟೆಯನ್ನು ನಾಳೆಗೆ ಮುಂದೂಡಲಾಗಿದೆ.
ಈ ಚುನಾವಣೆಯಲ್ಲಿ 41 ಸೀಟುಗಳನ್ನು ಗೆದ್ದಿರುವ ಎನ್ಸಿಪಿ, ಬಿಜೆಪಿ ಸಕರ್ಾರಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ನಿನ್ನೆ ಹೇಳಿತ್ತು. ಆದರೆ ಎನ್ಸಿಪಿ ಜತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ನಿರಾಕರಿಸಿತ್ತು.

By Suddi9

Leave a Reply

Your email address will not be published. Required fields are marked *