ಬಂಟ್ವಾಳ:ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಕ್ಷಣದ ಜೊತೆಗೆ ಸೂಕ್ತ ಕೌಶಲ್ಯ ತರಬೇತಿ ನೀಡಿದಾಗ ಹೊಸ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲೆ ಸೌಮ್ಯ ಎಚ್.ಕೆ. ಹೇಳಿದ್ದಾರೆ.ಇಲ್ಲಿನ ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಮೃದು ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಫರ್ವಿನ್ ಯು.ಟಿ. ಮಾಹಿತಿ ನೀಡಿದರು. ಗ್ರಂಥಪಾಲಕ ಡಾ.ಶ್ರೀನಿವಾಸ, ಗುರುಪ್ರಸಾದ್, ಯಕ್ಷಿತಾ, ಸಂಧ್ಯಾ, ನೀಮಾ ಮತ್ತಿತರರು ಇದ್ದರು.
