ಮುಂಬಯಿ: ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ಮತ್ತುಮುಂಬಯಿ ಚುಕ್ಕಿಸಂಕುಲದ
ಲೇಖಕ ಕಲಾವಿದರ ಬಳಗದ ಸಹಯೋಗದೊಂದಿಗೆ ಉಷಾ ನಗರ ಭಾಂಡೂಪ್ ಪಶ್ಚಿಮದಲ್ಲಿ ದಿವಂಗತ ಚಂದ್ರಶೇಖರ ರಾವ್ ಜನ್ಮ ದಿನಸಂಸ್ಮರಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂಸ್ಥೆಯ ಟ್ರಸ್ಟಿ ಶ್ರೀದೇವಿ ಚಂದ್ರಶೇಖರ ರಾವ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಕವಿ, ಕಥೆಗಾರ ಡಾ. ಕೆ.ಗೋವಿಂದ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಟ್ರಸ್ಟ್‌ನ ಕಾರ್ಯಕ್ರಮಗಳ
ಸವಿನೆನಪುಗಳ ಫೋಟೊ ಆಲ್ಬಮ್ ಬಿಡುಗಡೆಗೊಳಿಸಿ ಪ್ರಶಂಸೆ ವ್ಯಕ್ತಪಡಿಸಿದರು.

ಗೋವಿಂದ ಭಟ್ ಮಾತನಾಡಿ, ಕವಿತೆ ಬರೆಯುವ ತುಡಿತ, ಸೆಳೆತ ಇರುವ ಹೊಸ ಬರು ಅಂತರ್ಜಾಲ
ಆಯೋಜಿಸುವ ಕಾವ್ಯ ಸ್ಪರ್ಧೆಗಳಲ್ಲಿಪಾಲ್ಗೊಳ್ಳಬೇಕು. ಈಗ ಅಂತಹ ವಿಫುಲ ಅವಕಾಶಗಳು ಸಿಗುತ್ತಿವೆ.
ಚಂದ್ರಶೇಖರ ರಾವ್ ಅವರು ಒಳ್ಳೇ ಗುಣವಂತ, ಸೃಜನಶೀಲ ವ್ಯಕ್ತಿಆಗಿದ್ದರು ಎನ್ನುವುದಕ್ಕೆ ಇಂತಹ
ಸಂಕಷ್ಟದ ಸಮಯದಲ್ಲೂಅವರ ಮೇಲಿನ ಪ್ರೀತಿಯಿಂದ ಇಲ್ಲಿಸೇರಿದ ನೀವೇ ಸಾಕ್ಷಿ ಎಂದು ಹೇಳಿ,
ಬಹುಮಾನಪಡೆದತಮ್ಮ ಕವಿತೆಯೊಂದನ್ನು ವಾಚಿಸಿದರು.

ಶ್ರೀದೇವಿ ಸಿ.ರಾವ್ ಮಾತನಾಡಿ ಟ್ರಸ್ಟ್‌ನ ಹುಟ್ಟು, ಧ್ಯೇಯ, ಉದ್ಧೇಶಗಳನ್ನು ಹಂಚಿಕೊಂಡರು. ತಮ್ಮ ಪತಿಯ ಆಸೆಯಂತೆ ಸಾಹಿತ್ಯದ ಪರಿಚಾರಿಕೆ, ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ವಾರ್ಷಿಕವಾಗಿ
ಕವಿಗೋಷ್ಠಿಯನ್ನು ಹಮ್ಮಿಕೊಳ್ಳುತ್ತಿದ್ದೇವೆ. ಪತಿ ಹೇಳುತಿದ್ದ ಒಂದು ಮಾತು ಬರಹಗಾರರ ಬಳಗಕ್ಕೆ, ಅವರ ಸ್ನೇಹ ಒಡನಾಟಕ್ಕೆ ಎಂದೂ ಸಾವಿರುವುದಿಲ್ಲ. ಈ ಮಾತನ್ನು ನೀವು ಪ್ರತಿ ವರ್ಷದಂತೆ ಇಂದೂ ಸಹ
ಪ್ರೀತಿಯಿಂದಬಂದು ನಿಜವಾಗಿಸಿದ್ದೀರಿ. ನೆರೆದ ಕವಿಗಳು, ಸಾಹಿತ್ಯಾಸಕ್ತಬಂಧುಗಳಿಗೆ, ಚುಕ್ಕಿಸಂಕುಲದ ಕವಿ,
ನಾಟಕಕಾರ ಸಾ.ದಯ, ಗೋಪಾಲತ್ರಾಸಿ, ಭೀಮರಾಯ ಚಿಲ್ಕಾ ಮುಂತಾದವರ ನಿರಂತರ ಸಹಕಾರಕ್ಕೆ
ತುಂಬು ಹೃದಯದಿಂದಕೃತಜ್ಞತೆಸಲ್ಲಿಸುವೆ ಎಂದರು.

ಡಾ.ಜಿ.ಪಿ ಕುಸುಮಾ, ಅವರು ಚಂದ್ರಶೇಖರ ರಾವ್ ಅವರ ಕವಿತೆಗಳನ್ನು ಪ್ರಸ್ತುತ ಪಡಿಸಿದರು. ಕವಿಗಳಾದ ಡಾ.ಕರುಣಾಕರ ಶೆಟ್ಟಿಪಣಿಯೂರು, ಡಾ. ರಜನಿ ಪೈ, ಲಲಿತಾ ಪ್ರಭು ಅಂಗಡಿ, ಕುಸುಮಾ ಸಿ.ಅಮೀನ್, ಸರೋಜಾ ಅಮಾತಿ, ಶೋಭಾ ಶೆಟ್ಟಿ, ವಿಜಯಾ ಗೋವಿಂದ ಭಟ್ ತಮ್ಮ ಕವಿತೆಗಳನ್ನು ವಾಚಿಸಿದರು.

ವಿಜಯಾ ಗೌಡ ಮತ್ತು ಸರೋಜಾ ಅಮಾತಿ ಸುಶ್ರಾವ್ಯವಾಗಿ ಹಾಡನ್ನು
ಹಾಡಿದರು.
ಪ್ರಭಾವತಿ ಶೆಣೈ, ಶೈಲಾ ಶೆಟ್ಟಿ, ಶಶಿಕಲಾ ಕತ್ರಿಮತ್ತಿತರರುರು ಉಪಸ್ಥಿತರಿದ್ದರು.

ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕವಿ, ಕಥೆಗಾರ ಗೋಪಾಲ ತ್ರಾಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಚಿತ್ರ/ ವರದಿ: ರೊನಿಡಾ ಮುಂಬಯಿ

By Suddi9 Author

Suddi9

Leave a Reply

Your email address will not be published. Required fields are marked *