ಬಜ್ಪೆ: ಬಜ್ಪೆಯ ಗ್ರಾಮ ಪಂಚಾಯತ್ನ ಸಾರ್ವಜನಿಕ ಬಾವಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಮೃತನನ್ನು ಕಮ್ಮಾರ ವೃತ್ತಿಯ ಗಣೇಶ್(26) ಎಂದು ಗುರುತಿಸಲಾಗಿದೆ. ಗಣೇಶ್ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದರು ಎನ್ನಲಾಗಿದೆ.
16 bajpe 1
ಗುರುಪುರ ಕೈಕಂಬದಲ್ಲಿ ಅವರು ಚಮ್ಮಾರ ವೃತ್ತಿಯನ್ನು ನಿರ್ವಹಿಸುತ್ತಿದ್ದರು. ಆದರೆ ಕೆಲವು ದಿನಗಳಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಅವರು ಕೆಲಸ ಮಾಡುತ್ತಿರಲಿಲ್ಲವೆನ್ನಲಾಗಿದೆ. ತಾಯಿ ನಿಧನದಿಂದ ಅವರು ತೀವ್ರ ಕುಗ್ಗಿ ಹೋಗಿದ್ದರು ಎನ್ನಲಾಗಿದೆ. ಇವರ ಅಮ್ಮ ಜು.12, 2013ರಂದು ಬಜ್ಪೆ ತೊಟ್ಟಿಲಗುರಿಯಲ್ಲಿ ನಡೆದ ಗೋಡೆ ಕುಸಿತ ಸಂದರ್ಭದಲ್ಲಿ ಆಕಸ್ಮಿಕ ಸಾವನ್ನಪ್ಪಿದ್ದರು.
ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಶವವನ್ನು ಮೇಲಕ್ಕೆತ್ತಿದರು. ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *